ADVERTISEMENT

ರಾಷ್ಟ್ರೀಯ ಹೆದ್ದಾರಿ 50, 67ರ ಪ್ರಸ್ತಾವಕ್ಕೆ ಗಡ್ಕರಿ ಒಪ್ಪಿಗೆ: ಸಂಸದ ತುಕಾರಾಂ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:56 IST
Last Updated 22 ಡಿಸೆಂಬರ್ 2025, 5:56 IST
ಇ.ತುಕಾರಾಂ
ಇ.ತುಕಾರಾಂ   

ಹೊಸಪೇಟೆ: ‘ಸಂಸತ್ ಕಲಾಪದ ಸಂದರ್ಭದಲ್ಲಿ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ, ಎನ್‌ಎಚ್‌ 50 ಮತ್ತು 67ರ ಹಲವು ಪ್ರಸ್ತಾವಗಳಿಗೆ ಒಪ್ಪಿಗೆ ಪಡೆಯಲಾಗಿದೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.

ಕಮಲಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾರಿಗನೂರು, ಜಿಂದಾಲ್‌, ಕೆಪಿಸಿ, ಬಳ್ಳಾರಿಯ ಮೋತಿ ಫ್ಲೈಓವರ್‌ಗಳಿಗೆ ಒಪ್ಪಿಗೆ ಸಿಕ್ಕಿದೆ. ಕೂಡ್ಲಿಗಿ ತಾಲ್ಲೂಕಿನ ಕ್ಯಾಸಿನಕೇರಿ, ಕೆಲವು ಸರ್ವಿಸ್ ರಸ್ತೆಗಳು, ಒಳಚರಂಡಿ, ಕಾನಹೊಸಳ್ಳಿಗಳಲ್ಲಿನ ಅಪಘಾತ ವಲಯಗಳಲ್ಲಿ ಹೆದ್ದಾರಿ ಸುಧಾರಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದರು.

‘ಹಣಕಾಸಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ
ಉಲ್ಲೇಖಿಸಿದ್ದೇನೆ, ಜಿಎಸ್‌ಟಿ ಪಾಲಿನ ಬಗ್ಗೆ ಕೇಳಿದ್ದೇನೆ. ನನ್ನ ಮಾತಿಗೆ ಕೆಲವೊಂದು ಫಲ ಸಹ ಸಿಕ್ಕಿದೆ. ಜಲಜೀವನ್‌ ಮಿಷನ್‌ನಲ್ಲಿ ಉಪಯೋಗ ಪ್ರಮಾಣಪತ್ರ ನೀಡಿದ ಬಳಿಕ ಬಾಕಿ ಇರುವ ₹13,005 ಕೋಟಿ ಬಿಡುಗಡ ಮಾಡುವ ಭರವಸೆ ಸಹ ಸಿಕ್ಕಿದೆ ಎಂದು ಸಂಸದರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.