ಹರಪನಹಳ್ಳಿ: ಈರುಳ್ಳಿ ಇಳುವರಿ ಕುಂಠಿತ, ದರ ಕುಸಿತ ಕಾರಣ ತಾಲ್ಲೂಕಿನ ಚಿಗಟೇರಿ ಗ್ರಾಮದ ರೈತರೊಬ್ಬರು 12 ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಶನಿವಾರ ನಾಶಪಡಿಸಿದ್ದಾರೆ.
‘ಉತ್ತಮ ದರದ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದೆ. ಕಟಾವಿಗೆ ಬರುವಷ್ಟರಲ್ಲಿ ದರ ಕುಸಿತ ಆರಂಭವಾಯಿತು. ತೇವಾಂಶ ಹೆಚ್ಚಾಗಿ ಈಗ ಬೆಳೆ ಕೊಳೆಯಲು ಆರಂಭಿಸಿದೆ’ ಎಂದು ರೈತ ಡಿ.ರಾಮನಗೌಡ ವಿಷಾದಿಸಿದರು.
‘ಈಗ ಈರುಳ್ಳಿಗೆ ಉತ್ತಮ ದರ ಇಲ್ಲ. ಕಟಾವು ಮಾಡಿಸಿದರೆ ಇನ್ನಷ್ಟು ನಷ್ಟ ಆಗಲಿದೆ. ಹೀಗಾಗಿ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದೇನೆ. ಸರ್ಕಾರ ಬೆಳೆಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.