ADVERTISEMENT

‘ಪಂಪಾ ಮಹಾತ್ಮೆ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 13:08 IST
Last Updated 13 ಏಪ್ರಿಲ್ 2022, 13:08 IST
ಕಂಚಿ ಕಾಮಾಕ್ಷಿ ದೇವಿ ಪೀಠದ ಪೀಠಾಧೀಶ್ವರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ಮಂಗಳವಾರ ಹಂಪಿಯಲ್ಲಿ ‘ಪಂಪಾ ಮಹಾತ್ಮೆ’ ಕನ್ನಡ ಮತ್ತು ತೆಲುಗು ಭಾಷೆಯ ಪುಸ್ತಕ ಬಿಡುಗಡೆಗೊಳಿಸಿದರು. ಬಿಜೆಪಿ ಮುಖಂಡ ಎಚ್‌.ಆರ್‌. ಗವಿಯಪ್ಪ ಇದ್ದಾರೆ

ಹೊಸಪೇಟೆ (ವಿಜಯನಗರ): ‘ಪಂಪಾ ಮಹಾತ್ಮೆ’ ಕನ್ನಡ ಮತ್ತು ತೆಲುಗು ಭಾಷೆಯ ಪುಸ್ತಕವನ್ನು ಕಂಚಿ ಕಾಮಾಕ್ಷಿ ದೇವಿ ಪೀಠದ ಪೀಠಾಧೀಶ್ವರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ಮಂಗಳವಾರ ಹಂಪಿಯಲ್ಲಿ ಬಿಡುಗಡೆಗೊಳಿಸಿದರು.

‘ಪಂಪಾ ಮಹಾತ್ಮೆ ಎರಡೂ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಅನೇಕ ಜನ ವಿದ್ವಾಂಸರು ಸೇರಿಕೊಂಡು ಈ ಪುಸ್ತಕ ಹೊರತರಲು ಶ್ರಮಿಸಿದ್ದಾರೆ. ಈ ಪುಸ್ತಕ ಪ್ರಕಟಣೆಗೆ ಉದ್ಯಮಿ ಎಚ್‌.ಜಿ. ರಂಗನಗೌಡ ನೆರವಾಗಿದ್ದಾರೆ. ಅವಿಭಜಿತ ಆಂಧ್ರ ಪ್ರದೇಶದ ತೆಲುಗು ಭಾಷಿಕರು, ಕರ್ನಾಟಕದ ಜನತೆಗೆ ಈ ಪುಸ್ತಕ ಪ್ರಯೋಜನವಾಗಲಿದೆ’ ಎಂದು ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಬಿಜೆಪಿ ಮುಖಂಡ ಎಚ್.ಆರ್. ಗವಿಯಪ್ಪ, ಮಠದ ಭಕ್ತರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.