ADVERTISEMENT

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಡಿ.ಜೆ ಸೀಜ್: ದಿಢೀರ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 4:21 IST
Last Updated 5 ಸೆಪ್ಟೆಂಬರ್ 2022, 4:21 IST
ಹೊಸಪೇಟೆ ದೊಡ್ಡ ಮಸೀದಿ‌ ಎದುರು  ಭಾನುವಾರ ಮಧ್ಯರಾತ್ರಿ ನಡೆದ ಗಣಪನ ಮೂರ್ತಿಗಳ ಮೆರವಣಿಗೆ
ಹೊಸಪೇಟೆ ದೊಡ್ಡ ಮಸೀದಿ‌ ಎದುರು ಭಾನುವಾರ ಮಧ್ಯರಾತ್ರಿ ನಡೆದ ಗಣಪನ ಮೂರ್ತಿಗಳ ಮೆರವಣಿಗೆ   

ಹೊಸಪೇಟೆ: ಗಣೇಶನ ಮೂರ್ತಿ ವಿಸರ್ಜನೆ ವೇಳೆ ತಡರಾತ್ರಿ ನಿಯಮ ಮೀರಿ ಬಳಸಿದ ಡಿ.ಜೆ.ಯನ್ನು ಪೊಲೀಸರು ಸೀಜ್ ಮಾಡಿದ್ದನ್ನು ವಿರೋಧಿಸಿ ಕೆಲಕಾಲ ನಗರದ ಚಿತ್ರಕೇರಿ ಗಣೇಶ ಮಂಡಳಿಯವರು ಪುಣ್ಯಮೂರ್ತಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಡಿ.ಜೆ ಬಂದ್ ಮಾಡಿ ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ಗಣಪನ ಮೂರ್ತಿ ಸಮೇತ ಪಟ್ಟಣ ಠಾಣೆಗೆ ಹೋಗಲು ಮುಂದಾದರು.
ಅವರನ್ನು ಪೊಲೀಸರು ಪುಣ್ಯಮೂರ್ತಿ ವೃತ್ತದಲ್ಲಿ ತಡೆದರು.

ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಡಿ.ಜೆ ಬಿಡಬೇಕೆಂದು ಆಗ್ರಹಿಸಿದರು. ಬಳಿಕ ಪೊಲೀಸರ ಮನವೊಲಿಕೆ ನಂತರ ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.