ADVERTISEMENT

ಪಿ.ಎಂ ವಿಶ್ವಕರ್ಮ ತರಬೇತಿ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 16:30 IST
Last Updated 3 ಜನವರಿ 2024, 16:30 IST
ಹಂಪಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಪಿಎಂ ವಿಶ್ವಕರ್ಮ ತರಬೇತಿ ಆರಂಭವಾಯಿತು
ಹಂಪಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಪಿಎಂ ವಿಶ್ವಕರ್ಮ ತರಬೇತಿ ಆರಂಭವಾಯಿತು   

ಹೊಸಪೇಟೆ (ವಿಜಯನಗರ): ಪಿ.ಎಂ ವಿಶ್ವಕರ್ಮ ಮಾಸ್ಟರ್ ತರಬೇತಿದಾರರು ಮತ್ತು ಮೌಲ್ಯಮಾಪಕರ ತರಬೇತಿ ಕಾರ್ಯಾಗಾರ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಬುಧವಾರ ಆರಂಭವಾಯಿತು.

ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮ ಯೋಜನೆಯ ಉದ್ದೇಶ ಮತ್ತು ಉಪಯುಕ್ತತೆಯ ಬಗ್ಗೆ ಮಾತನಾಡಿದರು.

ಮಾಸ್ಟರ್ ತರಬೇತಿದಾರರಾಗಿದ್ದ ಭಾಸ್ಕರಾಚಾರ್ಯ ಮತ್ತು ಕನಿಲ್ ಜೋಹರ್ ಅವರು ಶಿಲ್ಪ ಮತ್ತು ಹೊಲಿಗೆಯ ಕುರಿತು ತಿಳಿಸಿದರು.

ADVERTISEMENT

ದೃಶ್ಯಕಲಾ ವಿಭಾಗದ ಮುಖ್ಯಸ್ಥ ಪ್ರೊ.ಮೋಹನ್ ರಾವ್ ಬಿ.ಪಂಚಾಳ ಪ್ರಾಸ್ತಾವಿಕ ಮಾತನಾಡಿದರು. ಎಚ್.ಎನ್. ಕೃಷ್ಣೇಗೌಡ, ರಾಮೇಶ ದೀಕ್ಷಿತ್, ಅಂಬರೀಶ್ ಮತ್ತು ಮಲ್ಲಿಕಾರ್ಜುನ ಮಹಾಮನಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.