ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಚಿಮನಹಳ್ಳಿ, ಕನ್ನಿಹಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 9:50 IST
Last Updated 29 ಜೂನ್ 2022, 9:50 IST
   

ಹೊಸಪೇಟೆ (ವಿಜಯನಗರ): ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗವು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮನಹಳ್ಳಿ, ಹಂಚಿನಾಳ ಮತ್ತು ಕನ್ನಿಹಳ್ಳಿ ಮಾರ್ಗದಲ್ಲಿ ಬುಧವಾರ ಬಸ್‌ ಸಂಚಾರ ಆರಂಭಿಸಿದೆ.

‘ಐದು ಕಿ.ಮೀ ನಿತ್ಯ ನಡಿಗೆ’ ಶೀರ್ಷಿಕೆ ಅಡಿ ಸೋಮವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಸಾರಿಗೆ ಇಲಾಖೆಯು ಚಿಮನಹಳ್ಳಿ, ಹಂಚಿನಾಳ, ಕನ್ನಿಹಳ್ಳಿ ಮಾರ್ಗವಾಗಿ ಇಟಗಿ ಹೋಬಳಿಗೆ ಹೋಗುವ ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್‌ ಸಂಚಾರ ಆರಂಭಿಸಿದೆ.

‘ಈ ಹಿಂದೆ ರಸ್ತೆ ತೀರ ಹದಗೆಟ್ಟಿತ್ತು. ಪ್ರಯಾಣಿಕರ ಸಂಚಾರ ಇಲ್ಲದರಿಂದ ಬಸ್‌ ನಿಲ್ಲಿಸಲಾಗಿತ್ತು. ಈಗ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಪುನಃ ಬಸ್‌ ಸಂಚಾರ ಆರಂಭಿಸಲಾಗಿದೆ’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಗ್ರಾಮಗಳಿಗೆ ಬಸ್‌ ಸೌಕರ್ಯ ಇಲ್ಲದ ಕಾರಣ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.