ADVERTISEMENT

ಲಕ್ಷ್ಮಿಗೆ ರಾಜ್ಯಮಟ್ಟದ ತರಬೇತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 4:16 IST
Last Updated 24 ಫೆಬ್ರುವರಿ 2026, 4:16 IST
ಬೆಂಗಳೂರಿನಲ್ಲಿ ಈಚೆಗೆ ಉತ್ತಮ ತರಬೇತುದಾರ ಪ್ರಶಸ್ತಿ ಗಳಿಸಿದ ಲಕ್ಷ್ಮಿ ಡಿ.
ಬೆಂಗಳೂರಿನಲ್ಲಿ ಈಚೆಗೆ ಉತ್ತಮ ತರಬೇತುದಾರ ಪ್ರಶಸ್ತಿ ಗಳಿಸಿದ ಲಕ್ಷ್ಮಿ ಡಿ.   

ಹೊಸಪೇಟೆ: ನಗರದ ಡಾನ್ ಬಾಸ್ಕೋ ಪ್ರೊಫೆಷನಲ್ ಅಕಾಡೆಮಿಯ ಅಂಗ ಸಂಸ್ಥೆಯಾದ ಡಾನ್ ಬಾಸ್ಕೋ ಟೆಕ್ ಸಂಸ್ಥೆಯಲ್ಲಿ ಐಟಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ (ಐಟಿ ಸಿಸಿಇ)  ತರಬೇತುದಾರರಾದ ಲಕ್ಷ್ಮಿ ಡಿ.ಅವರಿಗೆ ಬೆಂಗಳೂರಿನಲ್ಲಿ ಈಚೆಗೆ ನಡೆದ ಸ್ಕಿಲ್‌ ವೆಂಷನ್‌ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಅತ್ಯುತ್ತಮ ರಾಜ್ಯ ತರಬೇತುದಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಲಕ್ಷ್ಮಿ ಅವರು 15 ವರ್ಷಗಳಿಂದ ಯುವಕ ಯುವತಿಯರಿಗೆ ಮೂರು ತಿಂಗಳ ಕಾಲ ತರಬೇತಿ ನೀಡಿ ನಂತರ ಅವರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ. 

ಡಾನ್ ಬಾಸ್ಕೋ ಟೆಕ್ ಹೊಸಪೇಟೆ ಸಂಸ್ಥೆಯಲ್ಲಿ ಐಟಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆಗೆ ಡಿಜಿಟಲ್ ಮಿತ್ರ ಇನ್ನಿತರ ಕೋರ್ಸುಗಳನ್ನು ಕಲಿಸಿಕೊಡಲಾಗುತ್ತದೆ. 2010ರಿಂದ ಇಲ್ಲಿಯವರೆಗೆ ಸುಮಾರು 8,000 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT