ADVERTISEMENT

ಹೊಸಪೇಟೆ: ಪುನೀತ ಮಾಲೆ ವ್ರತಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 11:43 IST
Last Updated 1 ಮಾರ್ಚ್ 2023, 11:43 IST
ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್‌ ಪ್ರತಿಮೆ ಮುಂಭಾಗದಲ್ಲಿ ಕೆಲವರು ಬುಧವಾರ ಪುನೀತ ಮಾಲೆ ಕಾರ್ಯಕ್ರಮದ ಅಂಗವಾಗಿ ಮಾಲೆಗಳನ್ನು ಧರಿಸಿ ವ್ರತ ಆರಂಭಿಸಿದರು
ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್‌ ಪ್ರತಿಮೆ ಮುಂಭಾಗದಲ್ಲಿ ಕೆಲವರು ಬುಧವಾರ ಪುನೀತ ಮಾಲೆ ಕಾರ್ಯಕ್ರಮದ ಅಂಗವಾಗಿ ಮಾಲೆಗಳನ್ನು ಧರಿಸಿ ವ್ರತ ಆರಂಭಿಸಿದರು   

ಹೊಸಪೇಟೆ (ವಿಜಯನಗರ): ಅಪ್ಪು ಅಭಿಮಾನಿ ಬಳಗದಿಂದ ಹಮ್ಮಿಕೊಂಡಿರುವ ‘ಪುನೀತ ಮಾಲೆ’ ಕಾರ್ಯಕ್ರಮ ಬುಧವಾರ ನಗರದಲ್ಲಿ ಆರಂಭಗೊಂಡಿತು.

ನಗರದ ಡಾ. ಪುನೀತ್‌ ರಾಜಕುಮಾರ್ ವೃತ್ತದಲ್ಲಿ ಪುನೀತ್‌ ಅವರ ಅಭಿಮಾನಿಗಳು ಮಾಲೆ ಧರಿಸಿ ವ್ರತ ಆರಂಭಿಸಿದರು. ಇದಕ್ಕೂ ಮುನ್ನ ಅವರು ಪುನೀತ್‌ ರಾಜಕುಮಾರ್‌ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ವ್ರತಾಚರಣೆ ಭಾಗವಾಗಿ ಮಾ. 18ರ ವರೆಗೆ ಮಾಲೆಗಳನ್ನು ಧರಿಸಲಾಗುತ್ತದೆ. ಮಾಲಾಧಾರಿಗಳು ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಅಂಗಿ ಧರಿಸಿ ನಿತ್ಯ ಅಪ್ಪು ಭಾವಚಿತ್ರ ಇಟ್ಟು ಪೂಜಿಸಲಾಗುತ್ತದೆ. ಮಾ. 17ರಂದು ಡಾ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮಾ. 18ರಂದು ಬೆಂಗಳೂರಿನಲ್ಲಿರುವ ಪುನೀತ್‌ ಅವರ ಸಮಾಧಿ ಸ್ಥಳಕ್ಕೆ ತೆರಳಿ ಅಕ್ಕಿ, ಬೇಳೆ, ಎಣ್ಣೆ ಸಮರ್ಪಿಸಲಾಗುತ್ತದೆ. ಬಳಿಕ ಅದನ್ನು ಬಡವರಿಗೆ ಹಂಚಲಾಗುತ್ತದೆ.

ADVERTISEMENT

‘ಮಾ. 17 ಪುನೀತ್‌ ರಾಜಕುಮಾರ್‌ ಅವರ ಜನ್ಮದಿನವನ್ನು ‘ಸ್ಫೂರ್ತಿ ದಿನ’ವಾಗಿ ಆಚರಿಸಲಾಗುತ್ತದೆ. ಅದರ ಅಂಗವಾಗಿ ‘ಪುನೀತ ಮಾಲೆ’ ಹಮ್ಮಿಕೊಳ್ಳಲಾಗಿದೆ ಎಂದು ಅಪ್ಪು ಅಭಿಮಾನಿ ಬಳಗದ ಉಪಾಧ್ಯಕ್ಷ ಜೋಗಿ ತಾಯಪ್ಪ ತಿಳಿಸಿದ್ದಾರೆ. ಆದರೆ, ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ ಎಂಬ ಟೀಕೆಗಳು ಪುನೀತ್‌ ಅವರ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಏನೋ ಬೆರಳೆಣಿಕೆಯ ಜನರಷ್ಟೇ ಮಾಲೆ ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.