ಹೊಸಪೇಟೆ (ವಿಜಯನಗರ): ಬೆಳಿಗ್ಗೆಯಿಂದ ಸತತ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ.
ಬೆಳಿಗ್ಗೆಯಿಂದ ದಟ್ಟ ಕಾರ್ಮೋಡ ಕವಿದಿತ್ತು. ಬಳಿಕ ಬಿರುಗಾಳಿಯೊಂದಿಗೆ ಮಳೆ ಶುರುವಾಯಿತು. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ಸತತವಾಗಿ ಸುರಿಯುತ್ತಿದೆ. ಸತತ ಸುರಿಯುತ್ತಿರುವ ಮಳೆ ಬೇಸಿಗೆಯ ಬಿಸಿಲು ಮರೆಸಿದೆ.
ಕಳೆದ ಕೆಲವು ದಿನಗಳಿಂದ 41ರಿಂದ 42 ಡಿಗ್ರಿ ಆಸುಪಾಸಿನಲ್ಲಿ ಬಿಸಿಲು ಇರುತ್ತಿತ್ತು. ಕೆಂಡದಂತಹ ಬಿಸಿಲಿಗೆ ಜನ ಬೇಸತ್ತು ಹೋಗಿದ್ದರು. ಬುಧವಾರ ಸುರಿದ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಿನ್ನೆ ರಾತ್ರಿಯ ಬಿರುಗಾಳಿ ಮಳೆಗೆ ತಾಲ್ಲೂಕಿನ ಹಲವೆಡೆ ಬಾಳೆ ನೆಲಕಚ್ಚಿದೆ. ಇನ್ನಷ್ಟೇ ಸಮೀಕ್ಷೆ ನಡೆಸಿ, ನಷ್ಟದ ವಿವರ ಗೊತ್ತಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.