ADVERTISEMENT

ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:07 IST
Last Updated 29 ಡಿಸೆಂಬರ್ 2025, 5:07 IST
ಹೊಸಪೇಟೆಯಲ್ಲಿ ಎಸ್‌ಬಿಬಿಎನ್ ಬಿ.ಇಡಿ ಕಾಲೇಜಿನಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾಜ ಸೇವಕ ಕೋರಿಶೆಟ್ಟರ್‌ ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು
ಹೊಸಪೇಟೆಯಲ್ಲಿ ಎಸ್‌ಬಿಬಿಎನ್ ಬಿ.ಇಡಿ ಕಾಲೇಜಿನಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾಜ ಸೇವಕ ಕೋರಿಶೆಟ್ಟರ್‌ ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು    

ಹೊಸಪೇಟೆ: 'ಎಲ್ಲಾ ವೃತ್ತಿಗಳಿಗಿಂತ ವಿಶ್ವ ಮಾನ್ಯ ವೃತ್ತಿ ಎಂದರೆ ಅದುವೇ ಶಿಕ್ಷಣ ವೃತ್ತಿ, ಬೋಧನಾ ವೃತ್ತಿಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಅಗತ್ಯ ಇದೆ’ ಎಂದು ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪ ಹೇಳಿದರು.

ಇಲ್ಲಿನ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಬಿಬಿಎನ್ ಬಿ.ಇಡಿ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಮತ್ತು ಸಂಕಲ್ಪ ಎಂಬ ವಿಶೇಷ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.

‘ಪಠ್ಯ ಮತ್ತು ಪಠ್ಯೇತರ ವಿಷಯಗಳ ಮೂಲಕ ಉತ್ತಮ ಶಿಕ್ಷಕರನ್ನು ನಿರ್ಮಾಣ ಮಾಡುತ್ತಿರುವ ಈ ಕಾಲೇಜಿನ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದರು. ಮುಖಂಡ ಕೆ.ಬಿ.ಶ್ರೀನಿವಾಸ್,  ಕೆ.ಎಂ.ಪಾರ್ವತಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಗುಡೆಕೋಟೆ ನಾಗರಾಜ ಮಾತನಾಡಿದರು.

ADVERTISEMENT

ವಿದ್ಯಾರ್ಥಿ ಸಂಘದ ಸಂಚಾಲಕ ಪಿ.ಎಂ.ಸಿದ್ದಲಿಂಗಸ್ವಾಮಿ ವಾರ್ಷಿಕ ವರದಿ ಓದಿದರು. 2023- 24ನೇ ಸಾಲಿನ ಶ್ರೇಣಿ ವಿಜೇತರಿಗೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ₹5000 ಬಹುಮಾನ ನೀಡಲಾಯಿತು.

ಆಧ್ಯಾಪಕರಾದ ವಿಶ್ವನಾಥ ಗೌಡ, ಕೆ.ಎಂ.ಮಲ್ಲಿಕಾ, ಶೋಭಾ, ಸತೀಶ್ ಸೂರಿಮಠ. ಇಟಗಿ ಮಲ್ಲಿಕಾರ್ಜುನ, ಬಿದರಕುಂದಿ ಮಲ್ಲಿಕಾರ್ಜುನ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.