ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹರೇಗೊಂಡನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಒಳಗಿನ ಮೇಲ್ಚಾವಣಿಯ ಸಿಮೆಂಟ್ ಪದರು ಬುಧವಾರ ಕುಸಿದು ಬಿದ್ದಿದ್ದು, ಮಕ್ಕಳು ಹೊರಗಿದ್ದ ಕಾರಣ ಯಾವುದೆ ಅವಘಡ ಸಂಭವಿಸಿಲ್ಲ.
ಶಾಲೆಯ ನಲಿಕಲಿ ಕೊಠಡಿಯ ಮೇಲ್ಚಾವಣಿ ಶಿಥಿಲಗೊಂಡಿದ್ದರೂ ಅಲ್ಲಿಯೇ ತರಗತಿಗಳು ನಡೆಯುತ್ತಿದ್ದವು. ಮಕ್ಕಳು ತರಗತಿ ಒಳಗೆ ತೆರಳಿರಲಿಲ್ಲ, ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ಪದರು ಕುಸಿದು ಟೇಬಲ್ ಗಳ ಮೇಲೆ ಬಿದ್ದಿದೆ.
ಶಾಲೆಯ ಕೊಠಡಿಗಳನ್ನು ದುರಸ್ತಿಗೊಳಿಸಬೇಕು, ಗ್ರಾಮ ಪಂಚಾಯ್ತಿಯಿಂದ ಹೊಸದಾಗಿ ಅಭಿವೃದ್ಧಿಗೊಳಿಸುವ ನಿವೇಶನಗಳಿಂದ ಶೇಕಡ 3 ರಷ್ಟು ಶುಲ್ಕ ಪಡೆದರೂ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ ಎಂದು ಗ್ರಾಮದ ಮುಖಂಡ ಕರಿಬಸಪ್ಪ ಆರೋಪಿಸಿದರು.
ಶಾಲೆಯ ಕೊಠಡಿಯೊಂದರ ಬಾಗಿಲು ತೆರೆದಾಗ ಮಕ್ಕಳಿಲ್ಲದ ಸಮಯದಲ್ಲಿ ಮೇಲ್ಚಾವಣಿ ಬಿದ್ದಿದೆ, ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.