ADVERTISEMENT

ಹೊಸಪೇಟೆ: ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಸಡಗರ

ಈ ವರ್ಷವೂ ಮೊಹರಂ ಸರಳ, ಮೆರವಣಿಗೆ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 15:38 IST
Last Updated 19 ಆಗಸ್ಟ್ 2021, 15:38 IST
ಮೊಹರಂ ನಿಮಿತ್ತ ಹೊಸಪೇಟೆಯ ರಾಮಲಿ ಮಸೀದಿ ಎದುರು ಗುರುವಾರ ಭಕ್ತರು ಉಪ್ಪು ಹಾಕಿ, ಉದೀನ ಕಡ್ಡಿ ಹಚ್ಚಿದ್ದರಿಂದ ಉಪ್ಪಿನ ಗುಡ್ಡೆಯೇ ನಿರ್ಮಾಣವಾಗಿತ್ತು
ಮೊಹರಂ ನಿಮಿತ್ತ ಹೊಸಪೇಟೆಯ ರಾಮಲಿ ಮಸೀದಿ ಎದುರು ಗುರುವಾರ ಭಕ್ತರು ಉಪ್ಪು ಹಾಕಿ, ಉದೀನ ಕಡ್ಡಿ ಹಚ್ಚಿದ್ದರಿಂದ ಉಪ್ಪಿನ ಗುಡ್ಡೆಯೇ ನಿರ್ಮಾಣವಾಗಿತ್ತು   

ಹೊಸಪೇಟೆ (ವಿಜಯನಗರ): ಎರಡನೇ ವರ್ಷವೂ ಕೊರೊನಾ ಕರಿಛಾಯೆಯ ನಡುವೆ ಮೊಹರಂ, ವರಮಹಾಲಕ್ಷ್ಮಿ ಹಬ್ಬ ಸರಳವಾಗಿ ಆಚರಿಸುವ ಅನಿವಾರ್ಯತೆ ಬಂದೊದಗಿದೆ.

ಪ್ರತಿ ವರ್ಷ ಮೊಹರಂ ಹಿಂದಿನ ದಿನ ನಗರದ ರಾಮ ಟಾಕೀಸ್‌ ರಾಮಲಿ ಮಸೀದಿ ಬಳಿ ಹಿಂದೂ–ಮುಸ್ಲಿಮರು ಕೆಂಡ ಹಾದು ಹರಕೆ ತೀರಿಸುತ್ತಿದ್ದರು. ಈ ವರ್ಷ ಅದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸದ ಕಾರಣ ಭಕ್ತರು ಗುರುವಾರ ಮಸೀದಿ ಎದುರಿನ ಖಾಲಿ ಜಾಗದಲ್ಲಿ ಉಪ್ಪು ಹಾಕಿ, ಉದ್ದಿನ ಕಡ್ಡಿ ಬೆಳಗಿ ದೂರದಿಂದಲೇ ದೇವರಿಗೆ ಕೈಮುಗಿದು ತೆರಳಿದರು.

ಈ ವರ್ಷ ಮಸೀದಿ ಪರಿಸರದಲ್ಲಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ ಇಡೀ ಪರಿಸರ ಬಿಕೋ ಎನ್ನುತ್ತಿದೆ. ಶುಕ್ರವಾರ ಮೊಹರಂ ದಿನ ಪೀರಲಗಳ ಮೆರವಣಿಗೆ ನಡೆಸಲಾಗುತ್ತದೆ. ಈ ವರ್ಷಕ್ಕೂ ಅದಕ್ಕೂ ಅವಕಾಶ ಕೊಟ್ಟಿಲ್ಲ. ಪ್ರತಿ ವರ್ಷ ಮಸೀದಿ ಆವರಣದಲ್ಲಿ ಜನಜಾತ್ರೆ ಇರುತ್ತಿತ್ತು. ಹೆಚ್ಚಿನ ಜನ ಸೇರದಂತೆ ನಿರ್ಬಂಧ ಹೇರಿರುವುದರಿಂದ ಒಬ್ಬೊಬ್ಬರಾಗಿ ಬಂದು ದೇವರ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ.

ADVERTISEMENT

ಖರೀದಿ ಭರಾಟೆ:ಬೆಲೆ ಏರಿಕೆ ನಡುವೆ ವರಮಹಾಲಕ್ಷ್ಮಿ ಹಬ್ಬಕ್ಕೆ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಜನ ಅಗತ್ಯ ವಸ್ತುಗಳನ್ನು ಖರೀದಿಸಿದರು. ನಗರದ ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಎಪಿಎಂಸಿಯಲ್ಲಿ ಹೂ, ಹಣ್ಣು, ತರಕಾರಿ, ಬಾಳೆದಿಂಡು ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.