ADVERTISEMENT

ಕೃಷಿ ಪಂಪ್‌ಸೆಟ್‌ಗೆ ಸ್ಮಾರ್ಟ್ ಮೀಟರ್ ಬೇಡ; ಜೆ.ಎಂ. ವೀರಸಂಗಯ್ಯ

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:17 IST
Last Updated 20 ಫೆಬ್ರುವರಿ 2026, 2:17 IST
ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರೈತ ಸಂಘದ ರಾಜ್ಯ ಅಧ್ಯಕ್ಷ ಜೆ.ಎಂ. ವೀರಸಂಗಯ್ಯ ಸಂಪಾದಿಸಿದ ‘ಪ್ರಿ ಪೇಯ್ಡ್ ಮೀಟರ್ ಬಂತು... ರೈತರಿಗೆ ಆಪತ್ತು ತಂತು’ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು
ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರೈತ ಸಂಘದ ರಾಜ್ಯ ಅಧ್ಯಕ್ಷ ಜೆ.ಎಂ. ವೀರಸಂಗಯ್ಯ ಸಂಪಾದಿಸಿದ ‘ಪ್ರಿ ಪೇಯ್ಡ್ ಮೀಟರ್ ಬಂತು... ರೈತರಿಗೆ ಆಪತ್ತು ತಂತು’ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು   

ಕೊಟ್ಟೂರು: ‘ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದ್ದು, ಇದರಿಂದ ನೀರಾವರಿ ಕೃಷಿಗೆ ಬಹುದೊಡ್ಡ ಹೊಡೆತ ಬೀಳಲಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.

ಪಟ್ಟದ ಕೊಟ್ಟೂರೇಶ್ವರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಮ್ಮ ಸಂಪಾದಕತ್ವದ ‘ಪ್ರಿಪೇಯ್ಡ್ ಮೀಟರ್ ಬಂತು... ರೈತರಿಗೆ ಆಪತ್ತು ತಂತು’ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘2020ರಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಪರಿಣಾಮ ರಾಜ್ಯದಲ್ಲಿರುವ 45 ಲಕ್ಷ ಪಂಪ್‌ಸೆಟ್ ಹೊಂದಿರುವ ರೈತರ ಅನ್ನದ ತಟ್ಟೆಗೆ ವಿಷ ಹಾಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ 303.40 ಲಕ್ಷ ಎಕರೆ ಕೃಷಿ ಭೂಮಿ ಇದ್ದು, 87 ಲಕ್ಷ ರೈತ ಕುಟುಂಬಗಳಿವೆ. ಇದರಲ್ಲಿ 69 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಸುಮಾರು 600 ಟಿ.ಎಂ.ಸಿ. ಅಡಿ ಅಂತರ್ಜಲ ಬಳಸಿ, 45 ಲಕ್ಷ ಕೃಷಿ ಪಂಪ್‌ಸೆಟ್ ಇವೆ’ ಎಂದು ಮಾಹಿತಿ ನೀಡಿದರು.

‘ರೈತರು ಸ್ಮಾರ್ಟ್ ಮೀಟರ್‌ಗೆ ಮುಂಗಡ ಹಣ ಪಾವತಿಸಬೇಕು. ಕರೆಂಟ್ ಬಳಕೆಯಾದಂತೆ ಹಣ ಮುಗಿಯುತ್ತಾ ಹೋಗುತ್ತದೆ. ನಂತರ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಈ ಯೋಜನೆ ರೈತರಿಗೆ ಮಾರಕವಾಗಲಿದೆ’ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ರವಿಕುಮಾರ್, ಲೇಖಕ ಉಜ್ಜಿನಿ ರುದ್ರಪ್ಪ, ದ.ಸಂ.ಸ. ಮುಖಂಡ ಮರಿಸ್ವಾಮಿ ಮಾತನಾಡಿದರು. ಗುಡಿಯಾರ್ ಮಲ್ಲಿಕಾರ್ಜುನ್, ಪ್ರಜಾಸಿಂಹ, ರವಿಕುಮಾರ್, ಪಿ. ಚಂದ್ರಶೇಖರ್, ರಶ್ಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.