ADVERTISEMENT

ಗೋ ಸಾಗಾಟ: ಪೊಲೀಸರೇನು ಹಫ್ತಾ ವಸೂಲಿಗೆ ನಿಂತಿದ್ದಾರಾ?: ಪ್ರಮೋದ್ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 15:58 IST
Last Updated 13 ಜುಲೈ 2022, 15:58 IST
ಗುರುಪೂರ್ಣಿಮೆ ಅಂಗವಾಗಿ ಬುಧವಾರ ಸಂಜೆ ಹಗರಿಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ತುಲಾಭಾರದಲ್ಲಿ ಭಾಗವಹಿಸಿ ಪ್ರಮೋದ್ ಮುತಾಲಿಕ್ ಮಾತನಾಡಿದರು
ಗುರುಪೂರ್ಣಿಮೆ ಅಂಗವಾಗಿ ಬುಧವಾರ ಸಂಜೆ ಹಗರಿಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ತುಲಾಭಾರದಲ್ಲಿ ಭಾಗವಹಿಸಿ ಪ್ರಮೋದ್ ಮುತಾಲಿಕ್ ಮಾತನಾಡಿದರು   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಪಟ್ಟಣದಿಂದ ವಾರಕ್ಕೆ ಎರಡು ಬಾರಿ ಗೋವುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ. ಹೀಗಿದ್ದರೂ ಪೊಲೀಸರೇಕೇ ಸುಮ್ಮನಾಗಿದ್ದಾರೆ. ಪೊಲೀಸರು ಅದರ ಹಫ್ತಾ ವಸೂಲಿಗೆ ನಿಂತಿದ್ದಾರಾ? ಸೆಗಣಿ ತಿನ್ನುತ್ತಿದ್ದಾರಾ? ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮಸೇನೆ ತಾಲ್ಲೂಕು ಘಟಕದಿಂದ ಗುರುಪೂರ್ಣಿಮೆ ಅಂಗವಾಗಿ ಬುಧವಾರ ಸಂಜೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತುಲಾಭಾರದಲ್ಲಿ ಭಾಗವಹಿಸಿ ಮಾತನಾಡಿದರು.

ಗೋಹತ್ಯೆ ಕಾನೂನು ಜಾರಿಗೆ ಬಂದಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಗೋಹತ್ಯೆ ನಿರ್ಭಯವಾಗಿ ನಡೆಯುತ್ತಿದೆ. ರಾಜ್ಯದಲ್ಲಿ 30 ಜನ ಹಿಂದೂಗಳ ಕೊಲೆಯಾಗಿದೆ. ಅದು ಪಟ್ಟಣಕ್ಕೆ ವ್ಯಾಪಿಸುತ್ತದೆ. ಮುಸ್ಲಿಮರ ಹಿಂಸೆಯ ಮಾನಸಿಕತೆ ವಿರುದ್ಧ ಹಿಂದೂ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದರು.

ADVERTISEMENT

ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಜೈಲು ಕೇಸು ಅಂದರೆ ಅಡುಗೆ ಮನೆ, ಬಚ್ಚಲು ಮನೆ ಇದ್ದಂತೆ. ಒಂದು ಪ್ರಕರಣ ದಾಖಲಾದರೆ ಭುಜಕ್ಕೆ ಸ್ಟಾರ್ ಬಿದ್ದಂತೆ ಎಂದು ಹೇಳಿದರು.

ಹಿರೇಹಡಗಲಿಯ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿ, ಶಾಸ್ತ್ರಕ್ಕೆ ಮಾತು ಕೇಳದಿದ್ದರೆ ಶಸ್ತ್ರ ಹಿಡಿಯುತ್ತೇವೆ ಎಂದರು. ಪಟ್ಟಣದ ಹಾಲಸಿದ್ದೇಶ್ವರ ಸ್ವಾಮೀಜಿ, ಹಂಪಸಾಗರದ ನವಲಿ ಹಿರೇಮಠದ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಮೈಲಾರದ ವೆಂಕಟಪ್ಪ ಒಡೆಯರ್, ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ, ರವಿ ಬಡಿಗೇರ, ರಾಜು ಖಾನಾಪುರ, ಚಂದ್ರಶೇಖರ್, ಸಂತೋಷ್ ಪೂಜಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.