ADVERTISEMENT

ತುಂಗಭದ್ರಾ | ಕ್ರಸ್ಟ್‌ಗೇಟ್‌ ಎತ್ತದೆ ನೀರು ನದಿಗೆ ಬಿಡುಗಡೆ

ತುಂಗಭದ್ರಾ: ಒಳಹರಿವಿನ ಪ್ರಮಾಣದಲ್ಲಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 17:32 IST
Last Updated 1 ಜುಲೈ 2025, 17:32 IST
ತುಂಗಭದ್ರಾ ಅಣೆಕಟ್ಟೆಯ ಎಡದಂಡೆಯಲ್ಲಿನ ಜಲವಿದ್ಯುದಾಗಾರ ಮೂಲಕ ನದಿಗೆ ಹರಿದು ಬರುತ್ತಿರುವ ನೀರು  –ಪ್ರಜಾವಾಣಿ ಚಿತ್ರ/ ಲವ ಕೆ.
ತುಂಗಭದ್ರಾ ಅಣೆಕಟ್ಟೆಯ ಎಡದಂಡೆಯಲ್ಲಿನ ಜಲವಿದ್ಯುದಾಗಾರ ಮೂಲಕ ನದಿಗೆ ಹರಿದು ಬರುತ್ತಿರುವ ನೀರು  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಸೋಮವಾರ ಸಂಜೆಯಿಂದ ನದಿಗೆ ಎರಡು ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಎಡದಂಡೆ ಮುಖ್ಯ ಕಾಲುವೆ ಮತ್ತು ನದಿಗೆ ಹರಿಸಲಾಗುತ್ತಿದೆ.

‘ಸದ್ಯ ಕ್ರಸ್ಟ್‌ಗೇಟ್ ಎತ್ತಿ ನೀರು ಹರಿಸುವುದಿಲ್ಲ. ವಿದ್ಯುತ್‌ ಉತ್ಪಾದನೆಗೆ ನೀರು ಹರಿಸಿ, ಅದನ್ನು ಕಾಲುವೆಗೆ ಮತ್ತು ನದಿಗೆ ಬಿಡುವ ಅವಕಾಶ ಇದೆ. ಅದನ್ನೀಗ ಮಾಡಲಾಗುತ್ತಿದೆ‘ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT