ಹರಪನಹಳ್ಳಿ: ಇಲ್ಲಿನ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಜರುಗಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕು ಮರಬ್ಬಿಹಾಳು ಸರ್ಕಾರಿ ಶಾಲೆಯ ಜಗದೀಶ (41) ಮೃತರು.
‘ಈಚೆಗೆ ಅವರು ಜಾತಿ ಸಮೀಕ್ಷೆ ಕಾರ್ಯ ಮುಗಿಸಿ ಹರಪನಹಳ್ಳಿಗೆ ಬಂದಿದ್ದರು. ಸ್ವ ಗ್ರಾಮ ನಂದಿಬೇವೂರಿನಲ್ಲಿದ್ದ ಹುಷಾರಿಲ್ಲದ ತಂದೆ ತಾಯಿಯನ್ನು ಹರಪನಹಳ್ಳಿಯ ಬಾಡಿಗೆ ಮನೆಗೆ ಕರೆದುಕೊಂಡು ಬಂದು ನೋಡಿಕೊಳ್ಳಲು ಆಗುತ್ತಿಲ್ಲ ಎನ್ನುವ ಬೇಸರದಿಂದ ನೇಣಿಗೆ ಶರಣಾರಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅವರಿಗೆ ಪತ್ನಿ, ತಂದೆ, ತಾಯಿ ಹಾಗೂ ಪುತ್ರ, ಪುತ್ರಿ ಇದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.