ಹರಪನಹಳ್ಳಿ: ಚಿನ್ನ, ಬೆಳ್ಳಿ ಆಭರಣಗಳನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಬಂದ ಕಳ್ಳರು ಪಟ್ಟಣದ ಮಠದಕೇರಿಯ ಮನೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಬುಧವಾರ ಜರುಗಿದೆ.
ಮಠದಕೇರಿಯ ವೃದ್ಧೆ ಕೆ.ಮಂಜುಳಾ ಆಭರಣ ಕಳೆದುಕೊಂಡವರು.
ಮನೆಯಲ್ಲಿ ಅಜ್ಜಿ ಒಬ್ಬರೇ ಇರುವಾಗ ಮಧ್ಯಾಹ್ನ 12.30ಕ್ಕೆ ಬಂದ ಇಬ್ಬರು ಚಿನ್ನದ ಆಭರಣ ಪಾಲಿಶ್ ಮಾಡಿ ಕೊಡುವುದಾಗಿ ಹೇಳಿ ಮನೆಯ ಒಳಗೆ ಬಂದಿದ್ದಾರೆ. ಮೊದಲಿಗೆ ಕಂಚಿನ ಬಟ್ಟಲನ್ನು ಪಾಲಿಶ್ ಮಾಡಿದ್ದಾರೆ. ವಿಶ್ವಾಸದಿಂದ ಮಾತನಾಡುತ್ತಾ ಅಜ್ಜಿಯ ಕೈಗೆ ಪುಡಿ ಹಚ್ಚಿದ್ದಾರೆ, ಇದರಿಂದ ಅಜ್ಜಿಗೆ ಮಂಕು ಕವಿದಂತಾಗಿದೆ. ಆಗ ಆಕೆಯ ಕೈಯಲ್ಲಿದ್ದ ಬಂಗಾರದ 8 ಬಳೆಗಳು, 90.5 ಗ್ರಾಂ ತೂಕದ ಕೊರಳ ಸರ ದೋಚಿಕೊಂಡು ಪರಾರಿಯಾಗಿದ್ದಾರೆ.
ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.