ADVERTISEMENT

ಒಂಬತ್ತು ದಿನದೊಳಗೆ ಒಂದೇಕುಟುಂಬದ ಮೂವರ ಸಾವು

ಕೋವಿಡ್‌ನಿಂದ ಇಬ್ಬರು ಮಕ್ಕಳು, ಹೃದಯಾಘಾತದಿಂದ ತಂದೆ ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 11:58 IST
Last Updated 5 ಜೂನ್ 2021, 11:58 IST
ಶುಕ್ರವಾರ ರಾತ್ರಿ ನಿಧನರಾದ ಬೇರಿ ಸ್ಮಿತ್‌ ಅವರೊಂದಿಗೆ ಇತ್ತೀಚೆಗೆ ನಿಧನರಾದ ಅವರ ಮಕ್ಕಳಾದ ಸೋವಿಯೋ ಸ್ಮಿತ್‌, ಕ್ಯಾರೋಲಿನ್‌ ಸ್ಮಿತ್‌ 
ಶುಕ್ರವಾರ ರಾತ್ರಿ ನಿಧನರಾದ ಬೇರಿ ಸ್ಮಿತ್‌ ಅವರೊಂದಿಗೆ ಇತ್ತೀಚೆಗೆ ನಿಧನರಾದ ಅವರ ಮಕ್ಕಳಾದ ಸೋವಿಯೋ ಸ್ಮಿತ್‌, ಕ್ಯಾರೋಲಿನ್‌ ಸ್ಮಿತ್‌    

ಹೊಸಪೇಟೆ(ವಿಜಯನಗರ): ಒಂಬತ್ತು ದಿನಗಳ ಅಂತರದೊಳಗೆ ಒಂದೇ ಕುಟುಂಬದ ಮೂವರು ನಗರದಲ್ಲಿ ಮೃತಪಟ್ಟಿದ್ದಾರೆ.

ಒಂಬತ್ತು ದಿನಗಳ ಹಿಂದೆ ನಗರದ ಸೋವಿಯೊ ಸ್ಮಿತ್‌ ನಿಧನರಾಗಿದ್ದರು. ಅದರ ಮರುದಿನ ಅವರ ಹಿರಿಯ ಸಹೋದರಿ, ಸಮಾಜ ಸೇವಕಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಮರಣ ಹೊಂದಿದ್ದರು. ಇಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದರು.

ಇಬ್ಬರು ಮಕ್ಕಳ ಅಗಲಿಕೆಯ ನೋವಿನಿಂದ ಶುಕ್ರವಾರ ರಾತ್ರಿ ಬೇರಿ ಸ್ಮಿತ್‌ (72) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶನಿವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.