ADVERTISEMENT

‘ಪ್ರವಾಸೋದ್ಯಮ ಬಹುದೊಡ್ಡ ಉದ್ಯಮ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 13:16 IST
Last Updated 9 ಮಾರ್ಚ್ 2022, 13:16 IST

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಕ್ಷೇತ್ರವು ಸೇವಾ ಸೌಲಭ್ಯಗಳ ಬಹುದೊಡ್ಡ ಉದ್ಯಮವಾಗಿದೆ. ವಿಶ್ವದ ಅತಿದೊಡ್ಡ ಉದ್ಯಮವೂ ಹೌದು’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಸ್.ತಿಪ್ಪೇಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಹಂಪಿ-ಹೊಸಪೇಟೆ ಹೋಟೆಲ್ ಮಾಲೀಕರ ಸಂಘದ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಮತ್ತು ನಿಯಂತ್ರಣ (ಕೆಟಿಟಿಎಫ್)ಕಾಯ್ದೆ 2015ರಡಿ ನೋಂದಣಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೋವಿಡ್‌ನಿಂದ 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಹೋಟೆಲ್/ಲಾಡ್ಜ್‌/ರೆಸಾರ್ಟ್/ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‌ಗಳ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ 50ರಷ್ಟು ರಿಯಾಯಿತಿ, ಮೂರು ತಿಂಗಳ ವಿದ್ಯುತ್‌ ಶಕ್ತಿ ಡಿಮ್ಯಾಂಡ್‌/ಭದ್ರತಾ ಠೇವಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಸರ್ಕಾರದಿಂದ ಘೋಷಿಸಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಶ್ರೀಪಾದ್, ಪ್ರವಾಸೊದ್ಯಮ ಇಲಾಖೆಯ ತಾಂತ್ರಿಕ ಸಿಬ್ಬಂದಿ ವಿನೋದ್, ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹೋಟೆಲ್ ಮಾಲೀಕರು, ರೆಸ್ಟೋರೆಂಟ್, ರೆಸಾರ್ಟ್, ಟ್ರಾವೆಲ್ ಏಜೆನ್ಸಿ ಮತ್ತು ಟೂರ್ ಆಪರೇಟರ್‌ಗಳು, ಮನರಂಜನಾ ಪಾರ್ಕ್‍ಗಳ ಮಾಲೀಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.