ADVERTISEMENT

ಹೆದ್ದಾರಿ ಪಕ್ಕದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 14:25 IST
Last Updated 12 ಜುಲೈ 2023, 14:25 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್‍ನಿಂದ ಮೆಟ್ರಿ ಗ್ರಾಮದ ಹೊರವಲಯದ ವರೆಗೆ ರಾಜ್ಯ ಹೆದ್ದಾರಿ-29ರ ಎರಡು ಬದಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್‍ನಿಂದ ಮೆಟ್ರಿ ಗ್ರಾಮದ ಹೊರವಲಯದ ವರೆಗೆ ರಾಜ್ಯ ಹೆದ್ದಾರಿ-29ರ ಎರಡು ಬದಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು   

ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಕ್ರಾಸ್‍ನಿಂದ ಮೆಟ್ರಿ ಗ್ರಾಮದ ಹೊರವಲಯದ ವರೆಗೆ ರಾಜ್ಯ ಹೆದ್ದಾರಿ-29ರ ಎರಡು ಬದಿ ಸಾಮಾಜಿಕ ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಬಳ್ಳಾರಿಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪರಶುರಾಮ್ ಶಿರಬಡಗಿ ಮಾತನಾಡಿ, ಪ್ರಸ್ತುತ ಹೆದ್ದಾರಿ ಎರಡು ಬದಿ ಸುಮಾರು 6 ಕಿ.ಮೀ ವರೆಗೆ ಬೇವು, ಅರಳೆ, ಹೊಂಗೆ, ತಪ್ಸಿ, ನೇರಳೆ, ಗುಲ್‍ಮೊಹರ್, ಅರಳೆ, ಹುಣಸೆ, ಸಿಹಿ ಹುಣಸೆ, ಹಿಪ್ಪೆ, ಜಾಂಬು ನೇರಳೆ ಸೇರಿದಂತೆ ವಿವಿಧ ಜಾತಿಯ 1800ಸಸಿಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಹೆದ್ದಾರಿ ಬದಿ ನೆಟ್ಟಿರುವ ಸಸಿ ಗಿಡವಾದ ನಂತರ ಸಾರ್ವಜನಿಕರ ಕೊಡಲಿ ಪೆಟ್ಟಿಗೆ ಬಲಿಯಾಗಿವೆ ಎನ್ನುವ ದೂರು ಕೇಳಿಬಂದಿದೆ. ಈ ಕಾರಣಕ್ಕೆ ಅಲ್ಲಲ್ಲಿ ಗಿಡ ಕಡಿಯದಂತೆ ಎಚ್ಚರಿಕೆ ನಾಮಫಲಕ ಅಳವಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ADVERTISEMENT

ಉಪ ವಲಯ ಅರಣ್ಯಾಧಿಕಾರಿ ಪ್ರತಾಪ್ ಕಾಳೆ, ಅರಣ್ಯ ರಕ್ಷಕರಾದ ಪಂಪಾಪತಿ, ನಾಗರಾಜ, ಜಡೇಶ, ಮಹಮ್ಮದ್ ರಫಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.