
ಪ್ರಜಾವಾಣಿ ವಾರ್ತೆತುಂಗಭದ್ರಾ ಡ್ಯಾಂ ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ. ಸದ್ಯ, ಈ ಜಲಾಶಯಕ್ಕೆ ಹೊಸ ಗೇಟ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. 52 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರ್ಯ ನಡೆಯುತ್ತಿದೆ. ಮೂರು ರಾಜ್ಯಗಳ 15 ಲಕ್ಷ ಎಕರೆ ಕೃಷಿ ಜಮೀನಿಗೆ ನೀರುಣಿಸುವ ಜಲಾಶಯವಿದು. ಹಳೆಯ ಗೇಟ್ ಕಳಚಿ ತೆಗೆಯುವ ಮತ್ತು ಅಲ್ಲಿಗೆ ಹೊಸ ಗೇಟ್ ಅಳವಡಿಸುವ ಕಾರ್ಯ ಈಗ ನಡೆಯುತ್ತಿದೆ.