ADVERTISEMENT

ಆಸೆಗಿಂತ ಅರಿವು ಮುಖ್ಯ: ಹಿರಿಶಾಂತವೀರ ಸ್ವಾಮೀಜಿ

‘ವಚನಾಮೃತ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 9:03 IST
Last Updated 3 ಜುಲೈ 2021, 9:03 IST
ಹಿರಿಶಾಂತವೀರ ಸ್ವಾಮೀಜಿ
ಹಿರಿಶಾಂತವೀರ ಸ್ವಾಮೀಜಿ   

ಜಗತ್ತಿನಲ್ಲಿ ಅನೇಕರು ತಮ್ಮ ಸಿರಿವಂತಿಕೆ ಕುರಿತು ಜಂಭ ಕೊಚ್ಚಿಕೊಳ್ಳುತ್ತಾರೆ. ಗಳಿಸಿದ ಹಣ, ಬೆಳ್ಳಿ, ಬಂಗಾರ ಸಂಪತ್ತನ್ನು ಒಂದು ದಿನ ವೈರಿ ಅಥವಾ ಕಳ್ಳ ದೋಚಬಹುದು. ಮನುಷ್ಯ ಸಾಯುವಾಗಲೂ ಗಳಿಸಿದ ಸಂಪತ್ತನ್ನು ಕುಟುಂಬದ ಸದಸ್ಯರಿಗೆ ಬಿಟ್ಟು ಹೋಗುತ್ತಾನೆ.

'ಗಳಿಸಿದ ಹಣವೆಲ್ಲ ಕೂಡಿಟ್ಟೆ, ಸತ್ ಪಾತ್ರದ ಹಾದಿಯ ನೀ ಬಿಟ್ಟೆ, ಬೇಡ ಪರರ ಚಿಂತೆ ನಾಳೆ ಯಮಕೇಳಿದರೆನಂತೆ..' ಎಂದು ಅನುಭವಿಗಳ ಮಾತು ನಿಜಕ್ಕೂ ಸತ್ಯ. ಯಾರೇ ಆಗಲಿ ತಮ್ಮಲ್ಲಿರುವ ಬೇಡವಾದ ವಸ್ತುಗಳನ್ನು ದಾನ ಕೊಡುವುದು ಸ್ವಾಭಾವಿಕ. ಆದರೆ ತನಗೆ ಅಗತ್ಯದ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಹಿಂಜರಿಕೆಯಾಗುತ್ತದೆ. ಅತಿಯಾದ ಸಂಪತ್ತು ಅವನತಿಗೆ ದೂಡಬಹುದು ಎಂಬ ಅರಿವು ಇದ್ದರೂ ಆಸೆ ಎಂಬ ದೈತ್ಯ ಅದನ್ನು ಮರೆಮಾಚುತ್ತದೆ.

ಸಂತರು, ಮಹಾಂತರು, ದಾರ್ಶನಿಕರು ಇದನ್ನು 'ನೆಚ್ಚಿ ಕೆಡಬೇಡ' ಎಂದು ಅರಿತು ಮಹಾ ಜ್ಞಾನಿಗಳಾಗಿರುವುದನ್ನು ಕಾಣುತ್ತೇವೆ. ಬುದ್ಧ, ಮಹಾವೀರ, ಯೇಸು, ಪೈಗಂಬರ, ಬಸವಾದಿ ಶಿವಶರಣರು ತಮ್ಮ ನುಡಿ ತೋರಣಗಳ ಮೂಲಕ ಇದು ಯಾವುದು ನಿನ್ನದಲ್ಲ ಎಲ್ಲದೂ ಭಗವಂತನದು, ನೀನು ಈ ಭೂಮಿಗೆ ಅತಿಥಿ ಎಂದು ಸಾರಿದ್ದಾರೆ. ಇದನ್ನರಿತು ನಾವು ನಡೆಯದಿದ್ದರೆ ಕಷ್ಟಗಳ ಸರಮಾಲೆ ನಮ್ಮ ಕೊರಳಿಗೆ ನಿಶ್ಚಿತ.

ADVERTISEMENT

- ಹಿರಿಶಾಂತವೀರ ಮಹಾಸ್ವಾಮಿಗಳು, ಗವಿಮಠ, ಹೂವಿನಹಡಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.