ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ: ಹಂಪಿಯಲ್ಲಿ ವಾಹನ ಸಂಚಾರಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 15:34 IST
Last Updated 13 ಜುಲೈ 2022, 15:34 IST
‘ಪ್ರಜಾವಾಣಿ’ ವರದಿ ಪರಿಣಾಮ: ಹಂಪಿಯಲ್ಲಿ ವಾಹನ ಸಂಚಾರಕ್ಕೆ ತಡೆ
‘ಪ್ರಜಾವಾಣಿ’ ವರದಿ ಪರಿಣಾಮ: ಹಂಪಿಯಲ್ಲಿ ವಾಹನ ಸಂಚಾರಕ್ಕೆ ತಡೆ   

ಹೊಸಪೇಟೆ (ವಿಜಯನಗರ): ಸಿನಿಮಾ ಚಿತ್ರೀಕರಣದ ಹೆಸರಿನಲ್ಲಿ ಹಂಪಿ ವಿಜಯ ವಿಠಲ ದೇವಸ್ಥಾನದ ನಿರ್ಬಂಧಿತ ವಲಯದಲ್ಲಿ ಬೇಕಾಬಿಟ್ಟಿ ಸಂಚರಿಸುತ್ತಿದ್ದ ವಾಹನಗಳ ಓಡಾಟಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಬುಧವಾರ ತಡೆಯೊಡ್ಡಿದೆ.

‘ಹಂಪಿ ನಿರ್ಬಂಧಿತ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಬುಧವಾರ (ಜು.13) ವರದಿ ಪ್ರಕಟಿಸಿತ್ತು. ವಿಜಯ ವಿಠಲ ದೇವಸ್ಥಾನ ರಸ್ತೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಮೇಲೆ ನಿರ್ಬಂಧವಿದ್ದು, ಪ್ರವಾಸಿಗರಿಗೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ಮಂಗಳವಾರ ಅಲ್ಲಿ ತಮಿಳು ಸಿನಿಮಾ ತಂಡವೊಂದು ಕಾರವಾನ್‌, ಜನರೇಟರ್‌ ಹೊಂದಿದ ಬೃಹತ್‌ ವಾಹನಗಳೊಂದಿಗೆ ಇತರೆ 18ಕ್ಕೂ ಹೆಚ್ಚು ವಾಹನಗಳ ಜೊತೆಗೆ ತೆರಳಿತ್ತು. ಎಲ್ಲೆಡೆ ಬೇಕಾಬಿಟ್ಟಿ ಸಂಚರಿಸುತ್ತಿದ್ದವು. ಈ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಸಾರ್ವಜನಿಕರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ಪುರಾತತ್ವ ಇಲಾಖೆ, ಕಾರವಾನ್‌ ವಾಹನವನ್ನಷ್ಟೇ ಬಿಟ್ಟು, ಉಳಿದ ವಾಹನಗಳ ಸಂಚಾರದ ಮೇಲೆ ಬುಧವಾರ ನಿರ್ಬಂಧ ಹೇರಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.