ADVERTISEMENT

ವಿಜಯನಗರ: ಕಾರ ಹುಣ್ಣಿಮೆ ಸಂಭ್ರಮ ಹೆಚ್ಚಿಸಿದ ಎತ್ತುಗಳ ಓಟ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 15:43 IST
Last Updated 14 ಜೂನ್ 2022, 15:43 IST
ಕಾರ ಹುಣ್ಣಿಮೆ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯಲ್ಲಿ ಮಂಗಳವಾರ ಸಂಜೆ ಎತ್ತಿನ ಓಟದ ಸ್ಪರ್ಧೆ ನಡೆಯಿತು. –ಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.
ಕಾರ ಹುಣ್ಣಿಮೆ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯಲ್ಲಿ ಮಂಗಳವಾರ ಸಂಜೆ ಎತ್ತಿನ ಓಟದ ಸ್ಪರ್ಧೆ ನಡೆಯಿತು. –ಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.   

ಹೊಸಪೇಟೆ: ಕಾರ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ಎತ್ತು ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ಮಲಪನಗುಡಿ, ಕೊಂಡನಾಯಕನಹಳ್ಳಿ, ಹೊಸೂರು, ಗಾದಿಗನೂರು, ಬೈಲುವದ್ದಿಗೇರಿ, ವಡ್ಡರಹಳ್ಳಿ, ಇಂಗಳಗಿ, ಬುಕ್ಕಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಎತ್ತಿನ ಓಟದ ಸ್ಪರ್ಧೆ ನಡೆಯಿತು.

ಎತ್ತುಗಳ ಕೋಡಿಗೆ ಬಣ್ಣ ಬಳಿದು, ನೂಲಿನ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಯಿತು. ನಂತರ ಎತ್ತುಗಳನ್ನು ಸಾಲಾಗಿ ನಿಲ್ಲಿಸಿ, ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಲಪನಗುಡಿಯ ಮುಖ್ಯರಸ್ತೆಯಲ್ಲೇ ಓಟದ ಸ್ಪರ್ಧೆ ನಡೆಯಿತು.

ADVERTISEMENT

ಎತ್ತುಗಳೊಂದಿಗೆ ಅದರ ಮಾಲೀಕರೂ ಓಡಿದರು. ಇದನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಗ್ರಾಮಸ್ಥರು ನೆರೆದಿದ್ದರು. ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರಿಂದ ಹೊಸಪೇಟೆ–ಕಂಪ್ಲಿ ರಾಜ್ಯ ಹೆದ್ದಾರಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.