ADVERTISEMENT

ವಿಜಯನಗರ: ತಂಪೆರೆದ ವರುಣ, ಮಳೆ ಲೆಕ್ಕಿಸದೆ ಅಗತ್ಯ ವಸ್ತು ಖರೀದಿಸಿದ ಜನ

​ಪ್ರಜಾವಾಣಿ ವಾರ್ತೆ
Published 12 ಮೇ 2021, 4:47 IST
Last Updated 12 ಮೇ 2021, 4:47 IST
ಹೊಸಪೇಟೆಯ ಉದ್ಯೋಗ ಪೆಟ್ರೋಲ್ ಬಂಕ್ ಬಳಿಯ ಮಾರುಕಟ್ಟೆಯಲ್ಲಿ ಜನ ಸುರಿಯುತ್ತಿರುವ ಮಳೆಯಲ್ಲೇ ತರಕಾರಿ, ಹಣ್ಣು ಖರೀದಿಸಿದರು
ಹೊಸಪೇಟೆಯ ಉದ್ಯೋಗ ಪೆಟ್ರೋಲ್ ಬಂಕ್ ಬಳಿಯ ಮಾರುಕಟ್ಟೆಯಲ್ಲಿ ಜನ ಸುರಿಯುತ್ತಿರುವ ಮಳೆಯಲ್ಲೇ ತರಕಾರಿ, ಹಣ್ಣು ಖರೀದಿಸಿದರು   

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಸತತವಾಗಿ ಸುರಿದ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ.

ಮಂಗಳವಾರ ರಾತ್ರಿ ಗುಡುಗು, ಮಿಂಚು ಸಹಿತ ಬಿರುಸಿನ ಮಳೆಯಾಗಿತ್ತು. ಕೆಲಸಮಯ ಬಿಡುವು ಕೊಟ್ಟ ಮಳೆ ಬುಧವಾರ ಬೆಳಿಗ್ಗೆ ಮತ್ತೆ ಸುರಿಯಿತು. ಸೋಮವಾರ ಸಂಜೆಯೂ ಮಳೆಯಾಗಿತ್ತು.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಪಮಾನದಲ್ಲಿ ಭಾರಿ ಇಳಿಕೆ ಉಂಟಾಗಿದೆ. ಕಾರ್ಮೋಡ ಕವಿದು, ತುಂತುರು ಮಳೆ ಮುಂದುವರೆದಿದೆ. ಕೆಂಡದಂತಹ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ADVERTISEMENT

ಬೆಳಿಗ್ಗೆ ಆರರಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಜನ ಮಳೆ ಲೆಕ್ಕಿಸದೆ ಹೊರಗೆ ಬಂದು ತರಕಾರಿ,ಹಣ್ಣು ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.

ಹೊಸಪೇಟೆಯಲ್ಲಿ ಸಾರ್ವಜನಿಕರು ಮಳೆಯಲ್ಲೇ ಸಂಚರಿಸಿದರು

ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಹೊಸೂರು, ಧರ್ಮದ ಗುಡ್ಡ, ಬಸವನದುರ್ಗ, ನಾಗೇನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.