ಹೊಸಪೇಟೆ (ವಿಜಯನಗರ): ವಿಶ್ವ ಜಲ ದಿನದ ಪ್ರಯುಕ್ತ ನಾಗರಿಕ ಹಿತರಕ್ಷಣಾ ಸೇವಾ ಸಂಘದ ವತಿಯಿಂದ ನಗರದ ಮೂರು ಕಡೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸೋಮವಾರ ಮೂರು ನೀರಿನ ಅರವಟ್ಟಿಗೆಗಳಿಗೆ ಚಾಲನೆ ನೀಡಲಾಯಿತು.
ಸಂಡೂರು ರಸ್ತೆ, ಚೆಕ್ ಪೋಸ್ಟ್ ಹಾಗೂ ಜೆಸ್ಕಾಂ ಕಚೇರಿ ರಸ್ತೆಯಲ್ಲಿ ಈ ನೀರಿನ ಅರವಟ್ಟಿಗೆ ಸ್ಥಾಪಿಸಲಾಗಿದೆ. ‘ನೀರಿಲ್ಲದೇ ಯಾವ ಜೀವಿ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಜೀವಿಗೂ ನೀರಿನ ಅವಶ್ಯಕತೆಯಿದೆ. ಬೇಸಿಗೆ ಇನ್ನೇನು ಶುರುವಾಗಲಿದ್ದು, ಸ್ವಲ್ಪ ಓಡಾಡಿದರೂ ಬಾಯಾರಿಕೆ ಆಗುತ್ತದೆ. ಜನರ ದಾಹ ನೀಗಿಸುವುದಕ್ಕಾಗಿ ಈ ಅರಟ್ಟಿಗೆ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಂಘದ ಅಧ್ಯಕ್ಷೆ ಕಾಸೆಟ್ಟಿ ಉಮಾಪತಿ ಹೇಳಿದರು.
ಗೌಳಿ ರುದ್ರಪ್ಪ, ಮಂಜುನಾಥ್ ಹಾಗೂ ಚಂದನ್ ಸಿಂಗ್, ರಾಮಾಂಜಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.