ADVERTISEMENT

ಅಂಬೇಡ್ಕರ್ ಮೂರ್ತಿಗೆ ಮುಸುಕ್ಯಾಕೆ?

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 4:30 IST
Last Updated 1 ಜೂನ್ 2011, 4:30 IST

ಮುದ್ದೇಬಿಹಾಳ: ಪಟ್ಟಣದಲ್ಲಿ ಈಗಾಗಲೇ ಸ್ಥಾಪಿಸಿರುವ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಯ ಉದ್ಘಾಟನೆ ಪದೇ ಪದೇ ಮುಂದಕ್ಕೆ ಹೋಗುತ್ತಿರು ವುದನ್ನು ವಿರೋಧಿಸಿ ತಾಲ್ಲೂಕಿನ ಬಹುಜನ ಸಮಾಜ ಪಕ್ಷದ ಪದಾಧಿ ಕಾರಿಗಳು ಮಂಗಳವಾರ ತಹಸೀಲದಾರರನ್ನು ಭೇಟಿ ಮಾಡಿ ಕೂಡಲೇ ಮೂರ್ತಿ ಅನಾವರಣ ಮಾಡುವಂತೆ ಆಗ್ರಹಿಸಿದರು.

ಪಟ್ಟಣದ ಓಂ ಶಾಂತಿ ಭವನದ ಮುಂದೆ ಡಾ.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯಾಗಿ ಐದು ವರ್ಷ ಗಳಾಗಿವೆ. ಆದರೆ ಇದರ ಅನಾವರಣ ಕಾರ್ಯ ಯಾವುದಾದರೂ ನೆಪಕ್ಕೆ ಮುಂದಕ್ಕೆ ಹೋಗುತ್ತಿರುವುದು ಸರಿಯಲ್ಲ. ಭಾರತದ ಹೆಮ್ಮೆಯ ಪುತ್ರನನ್ನು ಈ ರೀತಿಯಲ್ಲಿ ಮರೆಯಲ್ಲಿ ಎಷ್ಟು ದಿನ ನಿಲ್ಲಿಸುತ್ತೀರಿ ಎಂದು ಅವರು ಪ್ರಶ್ನಿಸಿದ್ದು, ಈ ಕೂಡಲೇ ಅದನ್ನು ಉದ್ಘಾಟನೆ ಮಾಡದಿದ್ದರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಂದ್ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ತಾಲ್ಲೂಕು ಬಿ.ಎಸ್.ಪಿ. ಅಧ್ಯಕ್ಷ ಕೆ.ಬಿ.ದೊಡ್ಡಮನಿ, ಕೆ.ಬಿ.ಗೌಡರ, ಬಸು ಸಿದ್ದಾಪೂರ, ಬಾಲು ಸಿದ್ದಾಪೂರ, ಪರಶುರಾಮ ಚಲವಾದಿ, ಮಾರುತಿ ಚಲವಾದಿ, ಎಸ್.ಬಿ.ಕಟ್ಟಿಮನಿ, ಎಂ.ಬಿ.ಗುಬಚಿ, ಉಮೇಶ ಆಲಕೊಪ್ಪರ, ಶಶಿಕುಮಾರ ಗುಬಚಿ, ಸಂತೋಷ ತಮಗೊಂಡ, ಐ.ಕೆ. ಸಾಸನೂರ ಮೊದಲಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.