ADVERTISEMENT

ಕಾನೂನು ಅರಿವು ಮೂಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:55 IST
Last Updated 21 ಸೆಪ್ಟೆಂಬರ್ 2011, 5:55 IST

ವಿಜಾಪುರ: ಉಚಿತ ಕಾನೂನು ನೆರವು ಸೌಕರ್ಯ ಕುರಿತಂತೆ ಪ್ರತಿಯೊಬ್ಬ ನಾಗರಿಕರಿಗೂ  ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪು ಗಳ ಸದಸ್ಯೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ  ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಲ್. ಸುಬ್ರಮಣ್ಯಂ ಸಲಹೆ ನೀಡಿದ್ದಾರೆ.

ನಗರದ  ಸಿಕ್ಯಾಬ್ ಮಹಿಳಾ  ಕಾಲೇಜು  ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರ ಸಹಯೋಗ ದೊಂದಿಗೆ ಅಂಗನವಾಡಿ ಕಾರ್ಯಕರ್ತೆ ಯರಿಗೆ, ಸ್ತ್ರೀಶಕ್ತಿ ಗುಂಪುಗಳಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಒಂದು ದಿನದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಸೇವೆಗಳ ಪ್ರಾಧಿಕಾರವು 1995ರಲ್ಲಿ ಜಾರಿಗೆ ಬಂದಿದ್ದು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಸುತ್ತಿದ್ದು,  ಪ್ರತಿಯೊಬ್ಬ  ನಾಗರಿಕರಿಗೆ ಈ ಕಾನೂನು ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ವಾಗಿದೆ ಎಂದರು.

ಈ ಕಾನೂನು ಪರಿಶಿಷ್ಟ ಜಾತಿ, ಪಂಗಡ, ಮಾನಸಿಕ ಅಸ್ವಸ್ಥ, ಮಹಿಳೆ ಯರು, ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಹಾಗೂ 50ಸಾವಿರ ರೂ. ಆದಾಯದ ಒಳಗೆ ಇರುವ ಪ್ರತಿಯೊಬ್ಬ ನಾಗರಿಕರು ಉಚಿತವಾಗಿ ಕಾನೂನು ಸಲಹೆಗಳ ನೆರವು ಪಡೆಯಬಹು ದಾಗಿದೆ. ಮಕ್ಕಳು, ಮಹಿಳಾ ದೌರ್ಜನ್ಯ,  ಮಹಿಳೆಯರ ಹಕ್ಕುಗಳ ಬಗ್ಗೆ ಕೂಡ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

 ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ  ಸಂಘಗಳ ಮಹಿಳೆಯರು,  ಸಾಮಾನ್ಯ ಮಳೆಯರಿಗೆ ಕಾನೂನಿನ ನೆರವು ಕುರಿತಂತೆ ಮಾಹಿತಿ ಒದಗಿಸಿ ಅನ್ಯಾಯ, ವಂಚನೆಗೊಳಗಾದ  ಪ್ರತಿ ಯೊಬ್ಬ ನಾಗರಿಕರು ನ್ಯಾಯಸಮ್ಮತ ವಾಗಿ  ಪರಿಹಾರ ಪಡೆದುಕೊಳ್ಳುವ ಬಗ್ಗೆ ತಿಳಿಸಬೇಕು. ಪ್ರತಿ ನಾಗರೀಕನೂ  ಇದರ ಲಾಭ ಪಡೆಯಲು ಶ್ರಮಿಸುವಂತೆ  ಸಲಹೆ ನೀಡಿದರು.

ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಕೇಂದ್ರವನ್ನು ತೆರೆಯಲಾಗಿದ್ದು, ಇಲ್ಲಿ 15 ವರ್ಷಗಳ ನುರಿತ ಅನುಭವ ಹಾಗೂ ತರಬೇತಿ ಪಡೆದ ವಕೀಲರು ಕಾರ್ಯ ನಿರ್ವಸುತ್ತಿದ್ದಾರೆ.  ಅಪಘಾತ, ಚೆಕ್ ಬೌನ್ಸ್ ನಂತಹ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ  ಇಲ್ಲಿ ಬಗೆಹರಿಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಎನ್.ಎಸ್.ಎಸ್ ಕ್ಯಾಂಪ್‌ಗಳ, ಮಾಧ್ಯಮಗಳ, ಭಿತ್ತಿ ಪತ್ರಗಳ ಮೂಲಕ ಹೆಚ್ಚಿನ ಪ್ರಚಾರ ಪಡಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ, ಸ್ತ್ರೀಶಕ್ತಿ ಗುಂಪುಗಳಿಗೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸ್ತ್ರೀಶಕ್ತಿ ಗುಂಪುಗಳು ಸಂಘಟಿಸಿದ ಕಾರ್ಯಕ್ರಮಗಳಲ್ಲಿ ವಿವಿಧ ಇಲಾಖೆ, ಯುವ ಸಂಘಗಳ ಸಹಕಾರದೊಂದಿಗೆ ಭಾಗವಹಿಸಿ ಇದಕ್ಕೆ ಬೇಕಾದ ಎಲ್ಲ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ  ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್. ಬೆಟಗೇರಿ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳನ್ನು  ಪ್ರಸ್ತುತ ನಾಲ್ಕು ಹೋಬಳಿ ಮಟ್ಟದಲ್ಲಿ ಆಯೋ ಜಿಸಲಾಗಿದ್ದು ಮುಂದಿನ ಹಂತದಲ್ಲಿ ಹಳ್ಳಿ ಹಳ್ಳಿಗಳ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನು ಸೇವೆಗಳ ಬಗ್ಗೆ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ವಕೀಲರ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎನ್.ಮಠ, ಜಿಲ್ಲಾ ಸಂಯೋಜ ಕರು ಹಾಗೂ ಕ.ರಾ.ಪ ಬೆಂಗಳೂರು ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಆರ್.ಎಸ್. ಎಲಿ, ಅಂಗನವಾಡಿ ಕಾರ್ಯಕರ್ತರು, ಸ್ತ್ರಿಶಕ್ತಿ ಗುಂಪುಗಳು, ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಕಾಲೇಜಿನ ಹಲವು ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.