ADVERTISEMENT

ಕೊರಮ ಸಮಾಜಕ್ಕೆ ₨ 5ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 6:57 IST
Last Updated 5 ಜುಲೈ 2017, 6:57 IST
ವಿಜಯಪುರದಲ್ಲಿ ನಿರ್ಮಿಸಲಾಗುತ್ತಿರುವ ನೂಲಿ ಚಂದಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ಸಚಿವ ಎಂ.ಬಿ.ಪಾಟೀಲ, ವಿಡಿಎ ಅಧ್ಯಕ್ಷ ಆಜಾದ್‌ ಪಟೇಲ ಇದ್ದಾರೆ
ವಿಜಯಪುರದಲ್ಲಿ ನಿರ್ಮಿಸಲಾಗುತ್ತಿರುವ ನೂಲಿ ಚಂದಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ಸಚಿವ ಎಂ.ಬಿ.ಪಾಟೀಲ, ವಿಡಿಎ ಅಧ್ಯಕ್ಷ ಆಜಾದ್‌ ಪಟೇಲ ಇದ್ದಾರೆ   

ವಿಜಯಪುರ: ‘ಹಿಂದುಳಿದಿರುವ ಕೊರಮ, ಕೊರಚ ಜನಾಂಗದ ಸ್ಥಿತಿಗತಿಗಳನ್ನು ಸುಧಾರಿಸಲು ವಿಶೇಷ  ಕಾರ್ಯ ಯೋಜನೆ ರೂಪಿಸಲು ಮುಖ್ಯಮಂತ್ರಿ ಬಳಿ ವಿನಂತಿಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಕೊರಮ ಭಜಂತ್ರಿ ಕ್ಷೇತ್ರಾ ಭಿವೃದ್ಧಿ ಸಂಘದ ವತಿಯಿಂದ ಜಲ ಸಂಪನ್ಮೂಲ ಇಲಾಖೆಯ ₹ 2 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಶಿವ ಶರಣ ನೂಲಿ ಚಂದಯ್ಯ ಸಮುದಾಯ ಭವನಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿದ ಸಚಿವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕವಾಗಿ ಹಿಂದುಳಿದಿರುವ ಎಲ್ಲ ಜಾತಿ, ಜನಾಂಗಗಳನ್ನು ಗುರುತಿಸಿ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಿದ್ದಾರೆ. ಆದರೆ ಕೊರಮ       ಜನಾಂಗ ಅತ್ಯಂತ ಹಿಂದುಳಿದಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಈ ಜನಾಂಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಲು ನಾನೂ  ಕೂಡಾ ಮುಖ್ಯಮಂತ್ರಿಗೆ ವಿವರಗಳನ್ನು ನೀಡುತ್ತೇನೆ’ ಎಂದು ಹೇಳಿದರು.

ADVERTISEMENT

‘ಬಸವಣ್ಣನಂತೆ ಕಾಯಕ ಯೋಗಿ ಯಾಗಿದ್ದ ನೂಲಿ ಚಂದಯ್ಯನ ಸ್ಮರಣೆ ಗಾಗಿ ಜಲಸಂಪನ್ಮೂಲ ಇಲಾಖೆಯಿಂದ ₹ 2 ಕೋಟಿ ನೀಡುತ್ತಿದ್ದೇನೆ. ಈ ಭವನದ ಸದ್ವಿನಿಯೋಗ ಬಡವರಿಗೆ ಆಗಬೇಕು. ಚಂದಯ್ಯನವರ ಜನ್ಮಸ್ಥಳ ಶಿವಣಗಿಯಲ್ಲಿ 3 ತಿಂಗಳ ಹಿಂದೆ ನಡೆದ ಬೃಹತ್ ಸಮಾವೇಶದಲ್ಲಿ ಈ ಸಮಾಜಕ್ಕೆ ಭವನ ನಿರ್ಮಿಸಿ ಎಂಬ ಬೇಡಿಕೆ ಇತ್ತು. ನಿಮ್ಮ ಬೇಡಿಕೆಯನ್ನು 20 ದಿನಗಳಲ್ಲಿ ಮಂಜೂರು ಮಾಡಿ 100 ದಿನಗಳ ಒಳಗೆ ಭೂಮಿಪೂಜೆ ಮಾಡಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಕೊರಮ ಸಮಾಜ ಅಧ್ಯಕ್ಷ ಗೋವಿಂದರಾವ ಭಜಂತ್ರಿ ಮಾತನಾಡಿ, ‘ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಹೊಂದಿ ರುವ ನಮ್ಮ ಸಮಾಜದ ನೋವನ್ನು ಕೇಳುವವರಿಲ್ಲ. ಎಲ್ಲ ಹಿಂದುಳಿದ ಸಮಾ ಜಗಳನ್ನು ಗುರುತಿಸಿ ಪ್ರಾತಿನಿಧ್ಯ ನೀಡಿ ರುವ ಮುಖ್ಯಮಂತ್ರಿ, ನಮ್ಮ ಸಮಾಜದ ಭಜಂತ್ರಿಯವರಿಗೆ ಕೆಪಿಎಸ್‌ಸಿ ಸದಸ್ಯರ ನ್ನಾಗಿ ನೇಮಕ ಮಾಡಬೇಕು’ ಎಂದು ಹೇಳಿದರರು.

ವಿಧಾನ ಪರಿಷತ್ ಸದಸ್ಯ ಬಸನ ಗೌಡ ಪಾಟೀಲ ಯತ್ನಾಳ ಮಾತನಾಡಿ ದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಡಿಎ ಅಧ್ಯಕ್ಷ ಆಜಾದ್ ಪಟೇಲ, ದೊಡ್ಡಣ್ಣ ಭಜಂತ್ರಿ, ಕೆ.ಬಿ.ಭಜಂತ್ರಿ, ಚನ್ನಪ್ಪ ಭಜಂತ್ರಿ, ಶ್ರೀದೇವಿ ಉತ್ಲಾಸರ, ಕೃಷ್ಣಾ ಭಜಂತ್ರಿ, ರಾಜಶೇಖರ       ಭಜಂತ್ರಿ, ರಾಕೇಶ ಭಟ್ ನಿಡೋಣಿ, ಡಾ.ಶೇಖಪ್ಪ ಭಜಂತ್ರಿ ಇಟ್ಟಂಗಿಹಾಳ, ಜಗದೀಶ ಮಾನೆ, ನರಸಪ್ಪ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.