ADVERTISEMENT

ತಾಜಾತನದತ್ತ ಸಾಗುತ್ತಿದೆ ತಾಜಬಾವಡಿ

ಗಣೇಶ ಚಂದನಶಿವ
Published 29 ಆಗಸ್ಟ್ 2011, 6:55 IST
Last Updated 29 ಆಗಸ್ಟ್ 2011, 6:55 IST
ತಾಜಾತನದತ್ತ ಸಾಗುತ್ತಿದೆ ತಾಜಬಾವಡಿ
ತಾಜಾತನದತ್ತ ಸಾಗುತ್ತಿದೆ ತಾಜಬಾವಡಿ   

ವಿಜಾಪುರ: ಇಲ್ಲಿಯ ಐತಿಹಾಸಿಕ ತಾಜಬಾವಡಿ  ಗತವೈಭವ ಮರಳಿ ಪಡೆಯುವತ್ತ ನಿಧಾನವಾಗಿ ದಾಪುಗಾಲು ಹಾಕುತ್ತಿದೆ. ಐತಿಹಾಸಿಕವಾದ ಈ ಬಾವಿಯನ್ನು ಸ್ವಚ್ಛಗೊಳಿಸಿದ್ದು, ಅದನ್ನು ಸಂರಕ್ಷಿ ಸುವ ಕೆಲಸ ಆರಂಭಗೊಂಡಿದೆ.

ಕೆಲ ತಿಂಗಳ ಹಿಂದೆ ಈ ಬಾವಿಯ ನೀರೆಲ್ಲ ಕೊಳೆಯಾಗಿತ್ತು. ಚರಂಡಿ ನೀರು ಬಂದು ಅದಕ್ಕೆ ಸೇರ್ಪಡೆಯಾಗುತ್ತಿತ್ತು. ಸುತ್ತಲಿನ ಮನೆ ಯವರು ತಮ್ಮ ಪಾತ್ರೆ-ಬಟ್ಟೆಗಳನ್ನು ಅಲ್ಲಿ ತೊಳೆ ಯುತ್ತಿದ್ದರು.

ಸಾರ್ವಜನಿಕರು ಪ್ಲಾಸ್ಟಿಕ್ ಚೀಲ ಗಳಲ್ಲಿ ಹಾಕಿ ಚೆಲ್ಲಿರುವ ಕಸದ ರಾಶಿ ತೇಲುತ್ತಿತ್ತು. ದ್ವಾರ ಬಾಗಿಲಿನ ಇಕ್ಕೆಲಗಳಲ್ಲಿ ಜನ ಬಹಿರ್ದೆಸೆ ಮಾಡುತ್ತಿದ್ದರು. ಹಂದಿ-ಬಿಡಾಡಿ ದನಗಳು ರಾಜಾರೋಷವಾಗಿ ನುಗ್ಗುತ್ತಿದ್ದವು. ನೀರು ಕಲು ಷಿತಗೊಂಡಿದ್ದರಿಂದ ತಾಜಬಾವಡಿಯಲ್ಲಿಯ ಮೀನುಗಳು ಮೃತಪಟ್ಟಿದ್ದವು.

ಈ ಎಲ್ಲ ಕಾರಣಗಳಿಂದ ತಾಜಬಾವಡಿ ಕೊಳ ಚೆಯ ತಾಣವಾಗಿ ಮಾರ್ಪಟ್ಟು ದುರ್ನಾತ ಬೀರುತ್ತಿತ್ತು. ವೀಕ್ಷಿಸಲು ಬರುತ್ತಿದ್ದ ಪ್ರವಾಸಿಗರು ಅದರ ದುಸ್ಥಿತಿ ಕಂಡು ಜಿಲ್ಲಾ ಆಡಳಿತ -ನಗರಸಭೆಯವರಿಗೆ ಹಿಡಿಶಾಪ ಹಾಕುತ್ತಿದ್ದರು.

ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ತಾಜಬಾವಡಿಗೆ ಖುದ್ದಾಗಿ ಭೇಟಿ ನೀಡಿ ಪರಿ ಶೀಲನೆ ನಡೆಸಿದ್ದರು. ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ತಾಜಬಾವಡಿ ಶುಚಿತ್ವದ ಕುರಿತು ಚರ್ಚಿಸಿದ್ದರು. ಕೆಲ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದರು.

ಹೌದು...ಈಗ ತಾಜಬಾವಡಿ ಬದಲಾ ಗುತ್ತಿದೆ. ತಾಜಬಾವಡಿಗೆ ಕಾವಲುಗಾರರನ್ನು ನಿಯೋಜಿಸಲಾಗಿದೆ. ಈ ಸ್ಮಾರಕದಲ್ಲಿರುವ ಕಟ್ಟಡದಲ್ಲಿ ಜಿಲ್ಲಾ ವಕ್ಫ್ ಮಂಡಳಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ವಕ್ಫ್ ಮಂಡಳಿ ಯವರು ಇಬ್ಬರು ಕಾವಲುಗಾರರನ್ನು ನಿಯೋಜಿ ಸಿದ್ದಾರೆ. ಈ ಕಾವಲುಗಾರರು ಸರದಿಯಂತೆ ತಾಜ ಬಾವಡಿಯನ್ನು ಕಾಯುತ್ತಿದ್ದಾರೆ.

ತಾಜಬಾವಡಿಯಲ್ಲಿ ಕಸ ಎಡೆಯುವುದು, ಸ್ನಾನ ಮಾಡುವುದು, ಬಟ್ಟೆ-ಪಾತ್ರೆ ತೊಳೆಯು ವುದನ್ನು ನಿಲ್ಲಿಸಲಾಗಿದೆ. ಹೀಗಾಗಿ ಬಾವಡಿಯ (ಬಾವಿ) ನೀರು ಕ್ರಮೇಣವಾಗಿ ಶುಚಿಯಾ ಗುತ್ತಿದೆ. ಮೀನುಗಳು ಹಾಯಾಗಿ ಈಜು ಕೊಂಡಿವೆ. ಹಿಂದಿನಂತೆ ಅಲ್ಲೆಗ ಗಬ್ಬು ವಾಸನೆ ಬರುತ್ತಿಲ್ಲ.

`ತಾಜಬಾವಡಿ ಹಿಂದೆ ಅರ್ಧ ಊರಿಗೆ ನೀರು ಪೂರೈಸುವ ಮೂಲವಾಗಿತ್ತು. ಬಸ್ ನಿಲ್ದಾಣದ ಸುತ್ತಲಿನ ಪ್ರದೇಶದ ಕೊಳವೆ ಬಾವಿ, ಬಾವಿಗಳಿಗೆ ಈಗಲೂ ತಾಜಬಾವಡಿಯೇ ಜಲಮೂಲ. ಅದು ಉಕ್ಕಿದರೆ ಇವೂ ಉಕ್ಕುತ್ತವೆ. ಅದು ಬತ್ತಿದರೆ ಇವೂ ಬತ್ತುತ್ತವೆ~ ಎಂದು ಜನ ಹೇಳುತ್ತಾರೆ.

`ದೇವರ ಮೂರ್ತಿಗಳನ್ನು ತೆಗೆದುಕೊಂಡು ಭಕ್ತರು ಗಂಗಾ ಪೂಜೆಗೆ ಇಲ್ಲಿಗೆ ಬರುತ್ತಾರೆ. ಮೊದಲು ಬಾವಿಯಲ್ಲಿ ಇಳಿದು ಸ್ನಾನ ಮಾಡು ತ್ತಿದ್ದರು. ಈಗ ಬಾವಿಯಲ್ಲಿ ಯಾರನ್ನೂ ಬಿಡು ತ್ತಿಲ್ಲ. ಕೊಡಗಳಲ್ಲಿ ನೀರು ತುಂಬಿಕೊಂಡು ಹೊರ ಗಡೆ ಹೋಗಿ ಸ್ನಾನ ಮಾಡುವಂತೆ ಅವರಿಗೆ ಸೂಚಿ ಸುತ್ತಿದ್ದೇವೆ. ಬಟ್ಟೆ ತೊಳೆಯುವುದನ್ನು ತಡೆ ದಿದ್ದೇವೆ. ಮೊದಲು ತಕರಾರು ಮಾಡುತ್ತಿದ್ದ ಜನ ಈಗ ಸಹಕರಿಸುತ್ತಿದ್ದಾರೆ~ ಎಂದು ತಾಜಬಾವಡಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾವಲುಗಾರ ಮನಗೂಳಿ ಹೇಳಿದರು.

`ತಾಜಬಾವಡಿಯ ಸುತ್ತಲಿನ ಪ್ರದೇಶದಲ್ಲಿ ನಾವು ಬಹಳ ವರ್ಷಗಳಿಂದ ವಾಸವಾಗಿದ್ದೇವೆ. ತಾಜಬಾವಡಿ ಸ್ವಚ್ಛವಾಗಿರುವುದು ನಮಗೂ ಖುಷಿ ತಂದಿದೆ. ತಾಜಬಾವಡಿಯ ಹೊರಗಿನ ಜಾಗೆಯಲ್ಲಿ ಬಟ್ಟೆ ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ನಗರಸಭೆಗೆ ಸೂಚಿಸಿದ್ದರು. ಆ ಕೆಲಸ ಇನ್ನೂ ಆಗಿಲ್ಲ. ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯನ್ನೂ ನಿರ್ಮಿಸಬೇಕು~ ಎಂದು ಅಲ್ಲಿಯ ನಿವಾಸಿಗಳಾದ ಮೊಹ್ಮದ್ ಮತ್ತು ಹಣಮಂತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.