ADVERTISEMENT

ಪಥ ಸಂಚಲನ ಮೂಲಕ ಮತದಾರರಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 5:29 IST
Last Updated 6 ಏಪ್ರಿಲ್ 2013, 5:29 IST

ಚಡಚಣ: ಮುಂಬರುವ ವಿಧಾನಸಭೆ ಚುನಾವಣೆಗೆ ನಿಯೋಜಿಸಲಾದ ಗಡಿ ಭದ್ರತಾ ಯೋಧರು ಈಚೆಗೆ ಪಟ್ಟಣವೂ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ  ಪಥ ಸಂಚಲನ ನಡೆಸಿ, ಸಾರ್ವಜನಿಕರಲ್ಲಿ ಚುಣಾವಣೆಯ ಕುರಿತು ಜಾಗೃತಿ ಮೂಡಿಸಿದರು.

ಕೇರಳದ ತ್ರಿವೇಂಡ್ರಂ ಪಟ್ಟಣದಿಂದ ಆಗಮಿಸಿದ ಸುಮಾರು 40 ಯೋಧರ ತಂಡ, ಭೀಮಾ ನದಿ ತೀರದ ಗ್ರಾಮಗಳಾದ ಟಾಕಳಿ, ಉಮರಾಣಿ, ಹತ್ತಳ್ಳಿ, ಲೋಣಿ ಬಿಕೆ ಹಾಗೂ ಹಲಸಂಗಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ದೈರ್ಯ ಮೂಡಿಸಿದರು.

ಈ ಪಥ ಸಂಚಲನದಲ್ಲಿ ಸ್ಥಳಿಯ ಪೋಲಿಸ್ ಇನ್‌ಸ್ಪೆಕ್ಟರ್ ಎಂ.ಬಿ.ಅಸೋಡೆ, ಪಿಎಸ್‌ಐ ಮಹಾದೇವ ಯಲಿಗಾರ ಹಾಗೂ ಝಳಕಿ ಪೊಲೀಸ್ ಠಾಣೆಯ ಪಿಎಸ್‌ಐ ಬಾಬಾಸಾಹೇಬ ಪಾಟೀಲ ಸೇರಿದಂತೆ ಝಳಕಿ ಹಾಗೂ ಚಡಚಣ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT