ADVERTISEMENT

ಮಸಬಿನಾಳ: ವಿಜೃಂಭಣೆಯ ಗೌರಿಶಂಕರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2011, 8:20 IST
Last Updated 28 ನವೆಂಬರ್ 2011, 8:20 IST
ಮಸಬಿನಾಳ: ವಿಜೃಂಭಣೆಯ ಗೌರಿಶಂಕರ ಜಾತ್ರೆ
ಮಸಬಿನಾಳ: ವಿಜೃಂಭಣೆಯ ಗೌರಿಶಂಕರ ಜಾತ್ರೆ   

ಬಸವನಬಾಗೇವಾಡಿ: ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇತ್ತೀಚೆಗೆ  ಶ್ರೀ ಗೌರಿಶಂಕರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಸಿದ್ಧರಾಮ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ವಿಶಿಷ್ಟ ಹೂವುಗಳಿಂದ ಅಲಂಕರಿಸಿದ ರಥವನ್ನು ಎಳೆದರು. ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಸಂಜೆ ನಡೆದ ಸಮಾರಂಭದಲ್ಲಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.

ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಮುಖಂಡರಾದ ಮಲ್ಲು ಬೆಳ್ಳುಬ್ಬಿ, ಸಂಗರಾಜ ದೇಸಾಯಿ, ಗ್ರಾ.ಪಂ ಅಧ್ಯಕ್ಷ ರಾಜುಗೌಡ ಪಾಟೀಲ, ಕುಶರಾಜ ಪರೆಣ್ಣವರ, ತಾ.ಪಂ ಸದಸ್ಯರಾದ ತಿಪ್ಪಣ್ಣ ಯಳಮೇಲಿ, ಅಶೋಕ ಬೋರಗಿ, ಶಿವಪ್ಪ ದೇಗಿನಾಳ ಉಪಸ್ಥಿತರಿದ್ದರು. ಶಿವು ಕಲಬುರ್ಗಿ ಸ್ವಾಗತಿಸಿದರು, ಬಸವರಾಜ ಬೈಚಬಾಳ ವಂದಿಸಿದರು, ಗುಂಡು ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.