ADVERTISEMENT

ಮಾನವೀಯತೆ ಮೆರೆದರು...!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 8:20 IST
Last Updated 14 ಫೆಬ್ರುವರಿ 2012, 8:20 IST

ತಾಳಿಕೋಟೆ: ಸಮೀಪದ  ಮಿಣಜಗಿ ಕ್ರಾಸ್ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಪಟ್ಟಣದ  ಗೂಡ್ಸ್ ವಾಹನ ಮಾಲೀಕರ ಸಂಘದ ವರು ಮಾನವೀಯತೆ ಮೆರೆದರು.

ಭಾನುವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಯನ್ನು ನೋಡಿಯೂ, ನೋಡದಂತೆ ಹೋದ ವರೇ ಹೆಚ್ಚು. ಅದಕ್ಕೆ ಕಾರಣ ಪೊಲೀ ಸರ ಕೇಸ್ ಮತ್ತು ಉತ್ತರ ನೀಡಬೇ ಕಾದ ಸ್ಥಿತಿ ನಮಗೇಕೆ ಎಂಬ ಭಯ.
 
ಆದರೆ ಇದಾವುದನ್ನು ಲೆಕ್ಕಿಸದೇ ಮಾನವೀಯತೆಯೇ ದೊಡ್ಡದು ಎಂದುಕೊಂಡು ಪಟ್ಟಣದ ಗೂಡ್ಸ್ ವಾಹನ ಮಾಲೀಕರ ಸಂಘದವರು ಹಾಗೂ ಇತರರು ಸ್ಥಳೀಯ ಸಮು ದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಿದರು.
 
ಸಾಲದೆಂಬಂತೆ ಅವನ ಕೊಳೆಯಾದ ಬಟ್ಟೆ ತೆಗೆದು ಹೊಸ ವಸ್ತ್ರಗಳನ್ನು ತೊಡಿಸಿ ಜೀವ ಉಳಿಸುವ ಕಾರ್ಯ ಮಾಡಿದ್ದು ಶ್ಲಾಘ ನೀಯ. ಇದರಲ್ಲಿ ಸಂಘದ ಅಧ್ಯಕ್ಷ ಅದಮ್ ಅತ್ತಾರ, ಉಪಾಧ್ಯಕ್ಷ ಮುತ್ತು ದೇಸಾಯಿ, ಜಲಾಲ ಕೊರ್ತಿ, ಮಹಿಬೂಬ ಚೌದ್ರಿ, ಮುಸ್ತಾನ ಅವಟಿ, ಡೊಂಗಿ ಬಾಗಲಕೋಟೆ, ವೀರೇಶ ಬಾಗೇವಾಡಿ, ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.