ADVERTISEMENT

‘ಒಣಬೇಸಾಯ ತಾಂತ್ರಿಕತೆ ಅಭಿವೃದ್ಧಿಗೆ ಸಕಲ ನೆರವು’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:46 IST
Last Updated 17 ಡಿಸೆಂಬರ್ 2013, 5:46 IST

ವಿಜಾಪುರ: ‘ಒಣ ಬೇಸಾಯ ತಾಂತ್ರಿಕತೆ ಗಳನ್ನು ಅಭಿವೃದ್ಧಿ ಪಡಿಸಬೇಕು. ರೈತರ ಅಗತ್ಯತೆಗಳನ್ನು ಪರಾಮರ್ಶಿಸುವ ಉನ್ನತ ಮಟ್ಟದ ಸಂಶೋಧನೆ ಕೈ ಗೊಂಡು ಅದನ್ನು ರೈತ ಸಮುದಾಯಕ್ಕೆ ತಲುಪಿಸಬೇಕು’ ಎಂದು ಭಾರತೀಯ ಕೃಷಿ ಅನುಸಂಧಾನ ಪರಿ ಷತ್‌ನ ಉಪ ಮಹಾನಿರ್ದೇಶಕ ಡಾ.ಎ. ಕೆ. ಸಿಕ್ಕಾ ವಿಜ್ಞಾನಿಗಳಿಗೆ ಸಲಹೆ ನೀಡಿ ದರು.

ಧಾರವಾಡದ ಕೃಷಿ ವಿಶ್ವ ವಿದ್ಯಾ ಲಯ, ಹೈದರಾಬಾದ್‌ನ ಕೇಂದ್ರಿಯ ಒಣ ಬೇಸಾಯ ಸಂಶೋಧನಾ ಸಂಸ್ಥೆ ಯಿಂದ ಇಲ್ಲಿಯ ಹಿಟ್ನಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಹವಾಮಾನ ವೈಪರಿತ್ಯದಿಂದ ಚೇತರಿಸಿ ಕೊಳ್ಳುವ ಒಣ ಬೇಸಾಯ ಸಂಶೋಧನಾ ಯೋಜನೆಯ ಅಖಿಲ ಭಾರತ ಮಟ್ಟದ ದ್ವಿತೀಯ ವಾರ್ಷಿಕ ಪರಾಮರ್ಶೆ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.

‘ಒಣ ಬೇಸಾಯದಲ್ಲಿ ಅಧಿಕ ಆದಾಯ ತರುವ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿ ವಿಜ್ಞಾನಿ ಗಳು ಇದನ್ನು ಸವಾಲಾಗಿ ಸ್ವೀಕರಿಸಿ ರೈತ ಸಮುದಾಯದ ಆರ್ಥಿಕ ಸಬಲತೆಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಬೇಕಾಗುವ ಎಲ್ಲ ಸಹಾಯ ಹಾಗೂ ಸಹಕಾರವನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಿಂದ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಹೈದರಾಬಾದ್‌ನ ಕೇಂದ್ರೀಯ ಒಣಬೇಸಾಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ವೆಂಕಟೇಶ್ವರಲು, ‘ದೇಶದ 23 ಒಣ ಬೇಸಾಯ ಸಂಶೋಧನಾ ಕೇಂದ್ರಗಳಲ್ಲಿ ಅನೇಕ  ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ.  ಸಂಬಂಧಿಸಿದ ತಜ್ಞರು ಅವುಗಳನ್ನು ಪರಾಮರ್ಶಿಸಿ ಉತ್ತಮ ಫಲಿತಾಂಶ ನೀಡಿದ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಬೇಕಿದೆ’ ಎಂದರು.

‘ಆಯ್ದ ಕೃಷಿ ಸನ್ನಿವೇಶಗಳಿಗೆ ಸೂಕ್ತ ವಾದ ಹವಾಮಾನ ಬಗ್ಗೆ ಮುನ್ಸೂಚನೆ ಹಾಗೂ ಹವಾಮಾನ ಆಧರಿತ ಸಲಹೆ ಗಳನ್ನು  ತ್ವರಿತವಾಗಿ ರೈತರಿಗೆ ತಲುಪಿ ಸುವ ಕಾರ್ಯ ಮಾಡಬೇಕಿದೆ. ಇದ ರಿಂದ ಹವಾಮಾನ ವೈಪರಿತ್ಯಗಳಿಂದ ಉಂಟಾಗುವ ಬೆಳೆ ಹಾನಿ ಕಡಿಮೆ ಮಾಡಿ ಕೃಷಿಯಲ್ಲಿ ಸ್ಥಿರತೆ ಸಾಧಿಸಿ ಬಹುದು’ ಎಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎಸ್. ವಿಜಯ ಕುಮಾರ, ‘ಹಿಟ್ನಳ್ಳಿ ಪಾದೇಶಿಕ ಕಷಿ ಸಂಶೋಧನಾ ಕೇಂದ್ರದ ಒಣ ಬೇಸಾಯ ಅಭಿವೃದ್ಧಿ ಯೋಜನೆಯು ಅತ್ಯುತ್ತಮವಾಗಿ ಕಾರ್ಯನಿರ್ವ ಹಿಸುತ್ತಿದೆ’ ಎಂದರು.

ಒಣ ಬೇಸಾಯಕ್ಕೆ ಸಂಬಂಧಿಸಿದ 11 ಕಿರು ಹೊತ್ತಿಗೆಗಳನ್ನು ಬಿಡುಗಡೆ ಮಾಡ ಲಾಯಿತು. ಅಖಿಲ ಭಾರತ ಒಣ ಬೇಸಾಯ ಸಂಶೋಧನಾ ಯೋಜನೆ ಯಡಿ ಉತ್ತಮ ಸೇವೆ ಸಲ್ಲಿಸಿದ    ಹಿಂದಿನ ವಿಜ್ಞಾನಿಗಳಾದ ಡಾ. ವಿ.ಪಿ. ಬದನೂರ, ಡಾ.ಜಿ.ಎನ್. ದಂಡಗಿ, ಡಾ.ಎಂ.ಬಿ. ಗುಳೇದ ಅವರನ್ನು ಸನ್ಮಾನಿಸಲಾಯಿತು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಜೆ.ಎಸ್. ಅವಕ್ಕನವರ, ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಗುರು ಮೂರ್ತಿ, ಮುಖ್ಯ ವಿಜ್ಞಾನಿ ಡಾ.ಎಸ್. ಬಿ. ಕಲಘಟಗಿ ವೇದಿಕೆಯಲ್ಲಿದ್ದರು.

ಡಾ. ಶ್ರೀನಿವಾಸರಾವ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಧಾರ ವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಎಂ. ಖಾದಿ ಸ್ವಾಗತಿಸಿದರು. ಡಾ.ಆರ್.ಎಸ್. ಪೋದ್ದಾರ ಕಾರ್ಯಕ್ರಮ ನಿರೂಪಿಸಿದರು.

ಮಳೆ ನೀರಿನಿಂದ ತೇವಾಂಶ

ಕಾರ್ಯಾಗಾರದ ಎರಡನೇ ದಿನವಾದ ಸೋಮವಾರ ಒಣ ಬೇಸಾಯದಲ್ಲಿ ಮಳೆ ನೀರನ್ನು ಸಂಗ್ರಹಿಸಿ ತೇವಾಂಶ ಕಾಪಾಡಿಕೊಳ್ಳುವ ವಿವಿಧ ತಾಂತ್ರಿಕತೆಗಳ ಕುರಿತು ಪರಾಮರ್ಶೆ ನಡೆಯಿತು. ಮಹಾರಾಷ್ಟ್ರ, ಮಧ್ಯಪ್ರದೇಶದ ಇಂದೋರ್, ಪಂಜಾಬ್‌, ಆಂಧ್ರಪ್ರದೇಶದ ನಲಗೊಂಡ ಹಾಗೂ ಇತರ ಸಂಸ್ಥೆಗಳ ವಿಜ್ಞಾನಿಗಳು ಸ್ಥಳೀಯವಾಗ ತೇವಾಂಶ ಕಾಪಾಡಿಕೊಂಡು ಬೆಳೆಯ ಉತ್ಪಾದನೆಯನ್ನು  ಹೆಚ್ಚಿಸಿ ಕೊಳ್ಳವ ಕುರಿತಂತೆ ತಾವು ಕೈಗೊಂಡ ಪ್ರಯೋಗ ಕುರಿತಾದ ವರದಿ ಮಂಡಿಸಿದರು.

‘ದೇಶದಲ್ಲಿ ಹವಾಮಾನದಲ್ಲಿ ಬದಲಾವಣೆಯಾಗುತ್ತಿದ್ದು, ಕಾಲಕ್ಕೆ ಸರಿಯಾಗಿ ಮಳೆ ಬರುವುದಿಲ್ಲ. ಇದಕ್ಕಾಗಿ ಆಯಾ ಹಂಗಾಮು ಮತ್ತು ಹವಾಗುಣಕ್ಕೆ ಹೊಂದಿ ಕೊಳ್ಳುವ, ಕಡಿಮೆ ತೇವಾಂಶದಲ್ಲಿ ಬೆಳೆಯುವ ತಳಿಗಳನ್ನು ಉಪಯೋಗಿಸಬೇಕು. ಮಳೆ ನೀರು ಸಂಗ್ರಹಿಸಿ ಸ್ಥಳೀಯವಾಗಿ ತೇವಾಂಶ ಕಾಪಾಡಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.

ವಿಜಾಪುರ ಒಣ ಬೇಸಾಯ ಸಂಶೋಧನಾ ಕೇಂದ್ರ ತನ್ನ ಯೋಜನೆಯಡಿ ಆಯ್ದು ಕೊಂಡಿರುವ  ಕವಲಗಿ ಗ್ರಾಮಕ್ಕೆ ಬೇಟಿ ನೀಡಿದ ವಿಜ್ಞಾನಿಗಳು, ಬಾವಿಗೆ ಜಲಮರು ಪೂರಣ, ಚೌಕುಮಡಿಗಳ ಮೂಲಕ ತೇವಾಂಶ ಕಾಪಾಡಿಕೊಂಡು ಪ್ರಾಯೋಗಿಕ ವಾಗಿ ಬೆಳೆದಿರುವ ಕಡಲೆ, ಜೋಳ, ಕುಸುಬೆ ಬೆಳೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT