ADVERTISEMENT

ವಿಜಯಪುರ: ಕೋವಿಡ್‌ನಿಂದ ಇಬ್ಬರು ಸಾವು, 110 ಜನರಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:59 IST
Last Updated 27 ಜುಲೈ 2020, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಬಸವನ ಬಾಗೇವಾಡಿ ನಿವಾಸಿ, 61 ವರ್ಷ ವಯಸ್ಸಿನ ವೃದ್ಧೆ ರೋಗಿ(ಪಿ 94,732) ಮತ್ತು ಅಗಸನಾಳದ 64 ವರ್ಷ ವಯಸ್ಸಿನ ವೃದ್ಧ (ಪಿ 94,796) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.

ಬಸವನ ಬಾಗೇವಾಡಿ ನಿವಾಸಿಯು ರಕ್ತದೊತ್ತಡದಿಂದ ಬಳಲಿ ಜುಲೈ 23 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 25 ರಂದು ಮೃತಪಟ್ಟಿದ್ದಾರೆ.

ಅಗಸನಾಳದ ನಿವಾಸಿಯೂ ರಕ್ತದೊತ್ತಡದಿಂದ ಬಳಲಿ ಜುಲೈ 21ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 24ರಂದು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ADVERTISEMENT

110 ಪಾಸಿಟಿವ್‌: ಜಿಲ್ಲೆಯಲ್ಲಿ ಸೋಮವಾರ 110 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದ್ದು, ಇದುವರೆಗೆ ಒಟ್ಟು 2405 ಜನರಿಗೆ ಕೋವಿಡ್‌ ಸೋಂಕು ತಗುಲಿದೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 1744 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 634 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯಪುರ ಕೋವಿಡ್‌ ವಿವರ

ಇದುವರೆಗೆ 40,522 ಜನರ ಮೇಲೆ ನಿಗಾ
41,741 ಜನರ ಗಂಟಲು ದ್ರವ ಸಂಗ್ರಹ
38,988 ಜನರಿಗೆ ಸೋಂಕಿಲ್ಲ
348 ಮಂದಿಯ ವರದಿ ಬಾಕಿ
2,405 ಮಂದಿಗೆ ಸೋಂಕು ದೃಢ
27 ಮೃತಪಟ್ಟಿದ್ದಾರೆ
1,744 ಮಂದಿ ಗುಣಮುಖ
2,838 ಜನ ಕ್ವಾರಂಟೈನ್ 1–28 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ
35,913 ಜನ 28 ದಿನ ಕ್ವಾರಂಟೈನ್ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.