ADVERTISEMENT

19ನೇ ಶರಣ ತತ್ವ ಕಮ್ಮಟ 27ರಿಂದ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 15:26 IST
Last Updated 23 ಡಿಸೆಂಬರ್ 2024, 15:26 IST

ಸೋಲಾಪುರ: ನಗರದ ಲಿಂಗಶೆಟ್ಟಿ ಕಾರ್ಯಾಲಯದಲ್ಲಿ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ದಾವಣಗೆರೆ ಸಹಯೋಗದಲ್ಲಿ ಡಿ.27 ರಿಂದ 30ರ ವರೆಗೆ ‘19ನೇ ಶರಣ ತತ್ವ ಕಮ್ಮಟ’ ಆಯೋಜಿಸಲಾಗಿದೆ ಎಂದು  ದಾವಣಗೆರೆ ಬಸವ ಬಳಗದ ಅಧ್ಯಕ್ಷ  ಹುಚ್ಚಪ್ಪ ಮಾಸ್ತರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಡಿ.27 ರಂದು ಸಂಜೆ.6.30ಕ್ಕೆ ಉದ್ಘಾಟನಾ ಸಮಾರಂಭ, ಷಟಸ್ಥಲ ಧ್ವಜಾರೋಹಣ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವನ್ನು ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದಾವಣಗೆರೆ ಬಸವ ಬಳಗದ ಅಧ್ಯಕ್ಷ  ಹುಚ್ಚಪ್ಪ ಮಾಸ್ತರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದೆ ಪ್ರಣಿತಿ ಶಿಂಧೆ, ಅಕ್ಕಲಕೋಟದ ಮಾನಂದತಾಯಿ ಮಳಗಿ, ಅಮರ ಬಿರಜದಾರ, ಶಿವಶಂಕರ ಕಾಡಾದಿ, ರಾಜಶ್ರೀ ತಳಂಗೆ, ರಾಜಶ್ರೀ ಚಡಚಣಕರ ಭಾಗವಹಿಸಲಿದ್ದಾರೆ.

ಡಿ.28 ರಂದು ವಿವಿಧ ಗೋಷ್ಠಿಗಳು ಜರುಗಲಿದೆ. ಗುರುತತ್ವ, ಅನುಭಾವ, ಜಂಗಮ ತತ್ವ, ವಿಭೂತಿ- ರುದ್ರಾಕ್ಷಿ, ಮಂತ್ರ ಹೀಗೆ ವಿವಿಧ ವಿಷಯದ ಕುರಿತು ಗೋಷ್ಠಿಗಳು ನಡೆಯಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ADVERTISEMENT

ಡಿ.29 ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6ಕ್ಕೆ ‘ಮಕ್ಕಳಲ್ಲಿ ಧರ್ಮಪ್ರಜ್ಞೆಯ ಅವಶ್ಯಕತೆ’ ವಿಷಯದ ಕುರಿತು ಗೋಷ್ಠಿ ಜರುಗಲಿದೆ.

ಡಿ.30 ರಂದು ಬೆಳಿಗ್ಗೆ 10ಕ್ಕೆ ಕಮ್ಮಟದ ಸಮಾರೋಪ ಸಮಾರಂಭ ಜರುಗಲಿದೆ. ಅಧ್ಯಕ್ಷತೆಯನ್ನು ದಾವಣಗೆರೆಯ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು ವಹಿಸಲಿದ್ದಾರೆ. ಅತಿಥಿಗಳಾಗಿ ಸಿದ್ದೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಧರ್ಮರಾಜ ಕಾಡಾದಿ, ಸಿಂಧನೂರದ ಪಿ.ರುದ್ರಪ್ಪ, ಅಮರನಾಥ ಶೋಲಪುರೆ, ದಶರಥ ವಡತುಲೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.