ADVERTISEMENT

ವಿಜಯಪುರ: ಕೆ–ಸೆಟ್‌ ಬರೆದ 4614 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 14:59 IST
Last Updated 27 ಸೆಪ್ಟೆಂಬರ್ 2020, 14:59 IST
ವಿಜಯಪುರದ ಅಕ್ಕಮಹಾದೇವಿ  ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು
ವಿಜಯಪುರದ ಅಕ್ಕಮಹಾದೇವಿ  ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು   

ವಿಜಯಪುರ: ನಗರದ ಒಂಬತ್ತು ಕೇಂದ್ರಗಳಲ್ಲಿ ಭಾನುವಾರ ನಡೆದಕೆ-ಸೆಟ್ ಪರೀಕ್ಷೆಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 4614 ವಿದ್ಯಾರ್ಥಿಗಳು ಹಾಜರಾಗಿದ್ದರು.

ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 6,736 ವಿದ್ಯಾರ್ಥಿಗಳ ಪೈಕಿ 2,199 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಕೆ–ಸೆಟ್‌ ಪರೀಕ್ಷೆ ಹಾಗೂಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವುನೋಡೆಲ್ ಅಧಿಕಾರಿ ಪ್ರೊ.ನಾಮದೇವಗೌಡ ತಿಳಿಸಿದರು.

ಕೋವಿಡ್– 19 ಮಾರ್ಗಸೂಚನೆಗಳನ್ವಯ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ, ಸ್ಯಾನಿಟೈಸರ್, ಗ್ಲೌಜ್‍ಗಳನ್ನು ಬಳಸಿ, ಪರಸ್ಪರ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆದರು.

ADVERTISEMENT

ಪರೀಕ್ಷಾ ಕೇಂದ್ರಕ್ಕೆ ತೆರಳುವ ವೇಳೆಯಲ್ಲೇ ನಗರದಲ್ಲಿ ಮಳೆ ಸುರಿದ ಕಾರಣ ಹಾಗೂಪರೀಕ್ಷಾ ಕೇಂದ್ರಗಳ ಬಗ್ಗೆ ಸರಿಯಾದ ಮಾಹಿತಿ ಲಭಿಸದೇ ಕೆಲ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.