ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಪ್ರಾಥಮಿಕ ವರದಿಯಂತೆ 5322.19 ಹೆಕ್ಟೇರ್ ಕೃಷಿ ಬೆಳೆ ಹಾಗೂ 272.20 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ತಿಳಿಸಿದ್ದಾರೆ.
ಬೆಳೆ ಹಾನಿ ಜಂಟಿ ಸಮೀಕ್ಷಾ ತಂಡವನ್ನು ರಚಿಸಿ ಶೇ 80 ರಷ್ಟು ಸಮೀಕ್ಷೆ ಕೈಗೊಂಡಿದ್ದು, ಕೂಡಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಆ.5ರಿಂದ ಈವರೆಗೆ ಮಳೆಯಿಂದ 2 ಜಾನುವಾರು ಹಾಗೂ 104 ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಪರಿಹಾರವನ್ನು ವಿತರಿಸಲಾಗಿದೆ. ಭಾಗಶಃ ಹಾನಿಯಾದ 213 ಮನೆಗಳ ಪೈಕಿ ಜಂಟಿ ಸಮೀಕ್ಷಾ ವರದಿಯಂತೆ ಈಗಾಗಲೇ 160 ಮನೆಗಳಿಗೆ ಪರಿಹಾರಧನ ನೀಡಲಾಗಿದೆ. ಬಾಕಿ ಉಳಿದ 53 ಭಾಗಶಃ ಮನೆಗಳು ಇತ್ತೀಚಿನ 2-3 ದಿನಗಳಲ್ಲಿ ಹಾನಿಯಾಗಿದ್ದು, ಮನೆ ಹಾನಿಗೆ ಪರಿಹಾರ ವಿತರಿಸಲು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಮೇ 31 ರ ವರೆಗೆ 9 ಮಾನವ ಜೀವಹಾನಿ, 65 ಜಾನುವಾರು ಜೀವಹಾನಿ, 110 ಭಾಗಶಃ ಮನೆಗಳ ಹಾನಿ ಹಾಗೂ 70 ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಇವುಗಳಿಗೆ ಎಸ್‍ಡಿಆರ್‌ಎಫ್-ಎನ್‍ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಈಗಾಗಲೇ ಪರಿಹಾರವನ್ನು ವಿತರಿಸಲಾಗಿದೆ ಎಂದರು.
147.40 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ 218 ಫಲಾನುಭವಿಗಳಿಗೆ ₹12.81 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಹಾಯವಾಣಿ:
ಪ್ರವಾಹ ನಿಯಂತ್ರಣ ಹಾಗೂ ಪ್ರಕೃತಿ ವಿಕೋಪದ ತುರ್ತು ಕ್ರಮ ಕೈಗೊಳ್ಳಲು ಈಗಾಗಲೇ ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಪತ್ತು ನಿರ್ವಹಣೆಯ ಕುಂದು-ಕೊರತೆಗಳ ಕುರಿತು ಸಾರ್ವಜನಿಕರು ತಮ್ಮ ತಾಲ್ಲೂಕಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತು 24/7 ಸಹಾಯವಾಣಿ 1077 ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ
ವಿಜಯಪುರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ವಿಜಯಪುರ ತಾಲ್ಲೂಕಿಗೆ ಮಹಾಂತೇಶ ಮುಳಗುಂದ ಮೊ: 97429 71570 ಬಬಲೇಶ್ವರ ತಾಲ್ಲೂಕಿಗೆ ಪ್ರಶಾಂತ ಪೂಜಾರಿ ಮೊ: 98448 49238 ತಿಕೋಟಾ ತಾಲ್ಲೂಕಿಗೆ ರಾಹುಲ್ ಕುಮಾರ ಭಾವಿದೊಡ್ಡಿ ಮೊ: 94489 99232 ಬಸವನಬಾಗೇವಾಡಿ ತಾಲ್ಲೂಕಿಗೆ ಬಿ.ಎ.ಸೌದಾಗರ ಮೊ: 94483 92005 ಅವರನ್ನು ನೇಮಕ ಮಾಡಲಾಗಿದೆ. ಕೊಲ್ಹಾರ ತಾಲ್ಲೂಕಿಗೆ ಎಂ.ಎಚ್.ಬಾಂಗಿ ಮೊ: 99861 32717 ಇಂಡಿ ತಾಲ್ಲೂಕಿಗೆ ರಾಜಶೇಖರ ಡಂಬಳ ಮೊ: 88613 08444 ಮುದ್ದೇಬಿಹಾಳ ತಾಲ್ಲೂಕಿಗೆ ಪುಂಡಲೀಕ ಮಾನವರ ಮೊ: 90083 49150 ಹಾಗೂ ತಾಳಿಕೋಟೆ ತಾಲ್ಲೂಕಿಗೆ ಎಸ್.ಎಸ್.ಪಾಟೀಲ ಮೊ: 82779 30601/98803 35597 ಅವರನ್ನು ನೇಮಕ ಮಾಡಲಾಗಿದೆ. ನಿಡಗುಂದಿ ತಾಲ್ಲೂಕಿಗೆ ಎಸ್.ಕೆ.ಭಾಗ್ಯಶ್ರೀ ಮೊ: 77953 87217 ಚಡಚಣ ತಾಲ್ಲೂಕಿಗೆ ಸಿ.ಬಿ.ಕುಂಬಾರ ಮೊ: 98448 50411 ಸಿಂದಗಿ ತಾಲ್ಲೂಕಿಗೆ ವಿನಯ ಪಾಟೀಲ ಮೊ: 89514 20399 ದೇವರಹಿಪ್ಪರಗಿ ತಾಲ್ಲೂಕಿಗೆ ಉಮಾಶ್ರೀ ಕೊಳ್ಳಿ ಮೊ: 86184 97523 ಹಾಗೂ ಆಲಮೇಲ ತಾಲ್ಲೂಕಿಗೆ ಮಹೇಶ ಪೋತದಾರ ಮೊ: 94826 64180/ 94808 43021 ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.