ADVERTISEMENT

`70 ಸಾವಿರ ಶಾಲಾ ಮಕ್ಕಳಿಗೆ ಹಾಲು ವಿತರಣೆ'

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 7:23 IST
Last Updated 2 ಆಗಸ್ಟ್ 2013, 7:23 IST

ಸಿಂದಗಿ: `ಹಾಲು ಸರ್ವಶ್ರೇಷ್ಠ ಆಹಾರ. ಅಷ್ಟೇ ಸಾತ್ವಿಕವೂ ಕೂಡ ಹೌದು. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಏಕಕಾಲದಲ್ಲಿ ಕ್ಷೀರಭಾಗ್ಯ ಯೋಜನೆ ಪ್ರಾರಂಭಿಸಿರುವುದು ಸ್ವಾಗತಾರ್ಹ' ಎಂದು ಅಂಜುಮನ್-ಎ-ಇಸ್ಲಾಂ ಅಧ್ಯಕ್ಷ ಎ.ಎ. ದುಧನಿ ಹೇಳಿದರು.
 

ನಗರದ ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ)ದಲ್ಲಿ ಏರ್ಪಡಿಸಿದ್ದ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಉಪಪ್ರಾಚಾರ್ಯ ರಾಜಶೇಖರ ಹೊಸಗೌಡರ ಅತ್ಯಂತ ಗುಣಮಟ್ಟದ ಪೌಡರ್‌ನಿಂದ ಹಾಲು ತಯ್ಯಾರಿಸಿ ನೀಡಲಾಗುವುದು. ಯಾವತ್ತೂ ಶಾಲಾ ವಿದ್ಯಾರ್ಥಿಗಳು ಯಾವುದೇ ಭಯ, ಆತಂಕ ಇಟ್ಟುಕೊಳ್ಳದೇ  ಹಾಲು ಕುಡಿಯಬೇಕು. ತನ್ಮೂಲಕ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೊ.ಶಾಂತೂ ಹಿರೇಮಠ, ಅಧ್ಯಾಪಕ ಪ್ರಭುಲಿಂಗ ಲೋಣಿ ಮಾತನಾಡಿದರು. ವೇದಿಕೆಯಲ್ಲಿ ಅಂಜುಮನ್-ಎ-ಇಸ್ಲಾಂ ನಿರ್ದೇಶಕ ಮಹಿಬೂಬ ಹಸರಗುಂಡಗಿ, ಪ್ರಾಚಾರ್ಯ ಝಡ್.ಐ. ಅಂಗಡಿ,  ಪ್ರಾಧ್ಯಾಪಕ ಎ.ಎಂ. ಪಟೇಲ ಉಪಸ್ಥಿತರಿದ್ದರು.

ರಮ್ಜಾನ್ ಉಪವಾಸ ವ್ರತ ಮಾಡುತ್ತಿರುವ ಶಾಲಾ ವಿದ್ಯಾರ್ಥಿಗಳನ್ನು ಹೊರತುಪಡಿಸಿ ನೂರಾರು ಶಾಲಾ ಮಕ್ಕಳು ಹಾಲು ಕುಡಿದರು.
70ಸಾವಿರ ಶಾಲಾ ಮಕ್ಕಳಿಗೆ ಹಾಲು: ತಾಲ್ಲೂಕಿನ ವಿವಿಧ ಶಾಲೆಗಳ ಒಂದರಿಂದ ಹತ್ತನೆಯ ತರಗತಿಯ 70 ಸಾವಿರ ಮಕ್ಕಳು ಕ್ಷೀರಭಾಗ್ಯ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿರಾದಾರ `ಪ್ರಜಾವಾಣಿ' ಗೆ ತಿಳಿಸಿದ್ದಾರೆ.
ಸಿಂದಗಿ ತಾಲ್ಲೂಕಿನಲ್ಲಿ 16ಸಾವಿರ ಅನುದಾನರಹಿತ ಶಾಲೆಗಳಿವೆ. ಇವರಿಗೆ ಈ ಯೋಜನೆಯ ಲಾಭವಿಲ್ಲ ಎಂದು ಬಿಇಒ ವಿವರಣೆ ನೀಡಿದರು.

ಹಾಲು ವಿತರಣೆ
ತಾಳಿಕೋಟೆ:
ಪಟ್ಟಣದ ವಡ್ಡರ ಓಣಿಯಲ್ಲಿರುವ ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಆದರ್ಶ ಪ್ರಾಥಮಿಕ ಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮಕ್ಕೆ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಕಟ್ಟಿಮನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಪಿ.ಬಿ. ಗುಬ್ಬೇವಾಡ, ಎ.ಬಿ. ಮುಲ್ಲಾ, ಬಿರಾದಾರ, ಜಲಪೂರ, ರಾಘವೇಂದ್ರ ಕುಲಕರ್ಣಿ, ಮೇಟಿ ಸೇರಿದಂತೆ ಪಾಲಕರು ಇದ್ದರು.

ಎಸ್.ಕೆ. ಪ್ರೌಢಶಾಲೆಯಲ್ಲಿ:
ಎಸ್.ಕೆ. ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಕ್ಷ ಬಸನಗೌಡ ಗಬಸಾವಳಗಿ  ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಎಂ.ಎಸ್. ಬಿರಾದಾರ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೌಷ್ಟಿಕಾಂಶ ಕೊರತೆಯುಂಟಾಗಬಾರದೆಂದು ಜಾರಿಗೆ ತಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ಶಿಕ್ಷಕ ಸಿ.ವಿ. ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ಚಿನಗುಡಿ ಪ್ರಾರ್ಥನಾ ಗೀತೆ ಹಾಡಿದರು. ರಾಜು ರಾಠೋಡ ನಿರೂಪಿಸಿದರು. ಎಸ್.ಎಂ. ಪಾಟೀಲ ವಂದಿಸಿದರು.

ಹೊಸಹಳ್ಳ: ಸಮೀಪದ ಹೊಸಹಳ್ಳಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸರ್ಕಾರದ `ಕ್ಷೀರ ಭಾಗ್ಯ' ಯೋಜನೆಗೆ ಚಾಲನೆ ನೀಡಲಾಯಿತು.

ತುಂಬಗಿ ಗ್ರಾ.ಪಂ. ಅಧ್ಯಕ್ಷ ಸೋಮನಗೌಡ ಹಾದಿಮನಿ ಮಕ್ಕಳಿಗೆ ಹಾಲು ವಿತರಿಸಿದರು.

ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಶಂಕ್ರಗೌಡ ಬಿರಾದಾರ ವಹಿಸಿದ್ದರು. ಬಿ.ಸಿ. ಹುಬ್ಬಳ್ಳಿ, ಎಸ್.ಎನ್. ಬಿರಾದಾರ, ಶ್ರಿಕಾಂತ ಕೊಡೆಕಲ್ಲ, ಲತಾ ಸಿ.ಜಿ., ಎಸ್.ಆಯ್.ಪತ್ತಾರ, ಮೊದಲಾದವರಿದ್ದರು.

ಗುತ್ತಿಹಾಳ ಸರ್ಕಾರಿ ಶಾಲೆಯಲ್ಲಿ: ಗ್ರಾ.ಪಂ. ಸದಸ್ಯ ಬಿ.ಟಿ. ಪಾಟೀಲ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್.ಬಿ. ಬಿರಾದಾರ (ಸಾಸಾಬಾಳ), ಗುರುಲಿಂಗಯ್ಯ ಹಿರೇಮಠ, ಬಾಪುಗೌಡ ಬಿರಾದಾರ, ಬಂದಗಿಸಾಬ್ ನಾಯ್ಕೋಡಿ, ಬಿ.ಕೆ. ಬಿರಾದಾರ, ವೈ.ಬಿ. ಕರಿಭಾವಿ, ರೂಪಾ ಸಿ.ಎಸ್., ಸಿದ್ದಣ್ಣ ಬೂದಿಹಾಳ ಇದ್ದರು.

ತಮದಡ್ಡಿಯಲ್ಲಿ: ತಾ.ಪಂ. ಸದಸ್ಯ ಬಸಲಿಂಗಮ್ಮ ಬಗಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಈರಮ್ಮ ನಾಯ್ಕೋಡಿ ಅಧ್ಯಕ್ಷತೆ ವಹಿಸಿದ್ದರು. ಶಾಂತಪ್ಪಗೌಡ ಬಸರಕೋಡ, ಬಸನಗೌಡ ಕರಡ್ಡಿ, ಸಿದ್ದಪ್ಪ ನಾಯ್ಕೋಡಿ, ಸಿಆರ್‌ಪಿ ಎಂ.ಪಿ. ಆಲ್ಯಾಳ, ಶಿಕ್ಷಕರಾದ ಎಂ.ಬಿ. ದೇಸಾಯಿ ಅನ್ನಪೂರ್ಣಾ ಸಾಸನೂರ, ಶಿವಯೋಗಿ ಕತಿಗಾರ, ಆರ್.ಬಿ. ಮಂಗ್ಯಾಳ, ಆರ್.ಬಿ. ಮಠ ಉಪಸ್ಥಿತರಿದ್ದರು

ಸರ್ಕಾರಿ ಪ್ರೌಢಶಾಲೆ ಪೀರಾಪುರದಲ್ಲಿ: ಎಸ್‌ಡಿಎಂಸಿ ಅಧ್ಯಕ್ಷ ಸುರೇಶಬಾಬುಗೌಡ ಬಿರಾದಾರ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಆರ್.ಬಿ. ದಮ್ಮೂರಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಯೋಜನೆಗೆ ಚಾಲನೆ
ತಾಳಿಕೋಟೆ:
ಸರ್ಕಾರ ಶಾಲಾ ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಶಾಲಾ ಮಕ್ಕಳಿಗೆ ಹಾಲು ವಿತರಣೆ ಒಂದು ಉತ್ತಮ ಯೋಜನೆಯಾಗಿದ್ದು ಅದು ಸದ್ಬಳಕೆ ಮಾಡಿಕೊಂಡು ಸತ್ಪ್ರಜೆಗಳಾಗಿ ಎಂದು ವಿಜಾಪುರ ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಾಯಬಣ್ಣ ಆಲ್ಯಾಳ ಆಶಿಸಿದರು.

ಅವರು ಸಮೀಪದ ಗೋಟಖಂಡ್ಕಿಯಲ್ಲಿ ಗುರುವಾರ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಮೂಲಕ  ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಸಂಯೋಜಕ ಎಸ್.ಎಸ್. ಗಡೇದ, ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವಪ್ಪಗೌಡ ಬಿರಾದಾರ, ಸರ್ಕಾರದ ಯೋಜನೆಯ ಸದ್ಬಳಕೆಗೆ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ ಅದಕ್ಕೆಂದೆ ಹೊಸದಾಗಿ ಪಾತ್ರೆಗಳನ್ನು ಇತರ ಪರಿಕರಗಳನ್ನು ಖರೀದಿಸಿದ್ದು ಮಕ್ಕಳಿಗೆ ಆರೋಗ್ಯಯುತ ಆಹಾರ ಹಾಗೂ ಹಾಲನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಕಸ್ತೂರಿಬಾಯಿ ಭಂಟನೂರ, ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ಹಚಡದ, ಸದಸ್ಯ ಶಿವನಗೌಡ ಚೌದ್ರಿ, ಸಿಆರ್‌ಪಿ ಪಿ.ಎ.ಮುಲ್ಲಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸಿ.ಎಂ. ಬೆಂಡೆಗುಂಬಳ, ಮುಖ್ಯ ಶಿಕ್ಷಕ ಎಂ.ಎಸ್. ಹುಲ್ಲೂರ, ಎಂ.ಎಸ್. ಗಾಣಿಗೇರ, ಬಿ.ಸಿ. ಗೋಗಿ, ಸಿ.ಪಿ. ಲತಾ,  ಅಂಗನವಾಡಿ ಕಾರ್ಯಕರ್ತೆ,  ಮೊದಲಾದವರಿದ್ದರು. ಎ.ಎಸ್. ರೂಪನವರ ನಿರೂಪಿಸಿದರು. ಜೆ.ಎಸ್. ಬ್ಯಾಕೋಡ ವಂದಿಸಿದರು.

ಭಂಟನೂರ ಪ್ರಾಥಮಿಕ ಶಾಲೆಯಲ್ಲಿ: ವಿಜಾಪುರ ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಾಯಬಣ್ಣ ಆಲ್ಯಾಳ ಶಾಲಾ ಮಕ್ಕಳಿಗೆ ಹಾಲು ಭಾಗ್ಯ ವಿತರಣೆಯನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ  ಮುಖ್ಯ ಶಿಕ್ಷಕ ಆರ್.ಎಂ. ಮುರಾಳ ಇದ್ದರು. ಬ್ಯಾಕೋಡ ನಿರೂಪಿಸಿದರು. ಎಸ್.ಎಸ್. ಲೋಣಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT