ADVERTISEMENT

ಕಳುವಾದ ಫೋನ್‌ಗಳ ದುರ್ಬಳಕೆ ತಡೆಗೆ ವೆಬ್ ಪೋರ್ಟಲ್: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 11:02 IST
Last Updated 11 ಮಾರ್ಚ್ 2023, 11:02 IST
ಎಚ್‌.ಡಿ.ಆನಂದಕುಮಾರ್‌
ಎಚ್‌.ಡಿ.ಆನಂದಕುಮಾರ್‌   

ವಿಜಯಪುರ: ಕಳುವಾದ ಅಥವಾ ಕಳೆದುಕೊಂಡ ಮೊಬೈಲ್ ಫೋನ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಸೇರಿದಂತೆ ಇತರೆ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿದ್ದು, ಇಂತಹ ಮೊಬೈಲ್‌ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಟೆಲಿ ಕಮ್ಯೂನಿಕೇಷನ್ ಇಲಾಖೆಯಿಂದ ಕಳುವಾದ ಮೊಬೈಲ್ ಫೋನ್‌ಗಳ ಬ್ಲಾಕ್ ಮಾಡಲು ಸಿಇಐಆರ್‌ (Central Equipment Identity Register) ಎಂಬ ವೆಬ್ ಪೋರ್ಟಲ್ ಅನಾವರಣ ಮಾಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದ್ದಾರೆ.

ಕಳುವಾದ ಅಥವಾ ಕಾಣೆಯಾದ ಅಥವಾ ಸುಲಿಗೆಯಾದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸುವಂತೆ ಅವರು ತಿಳಿಸಿದ್ದಾರೆ.

ಮೊಬೈಲ್ ಫೋನ್ ಕಳುವಾದ ಅಥವಾ ಕಾಣೆಯಾದ ಅಥವಾ ಸುಲಿಗೆಯಾದರೆ ಮೊದಲು KSP app official ಎಂದು ಮೊಬೈಲ್ ಅಪ್ಲಿಕೇಷನ್ ‍‍(ಪ್ಲೇ-ಸ್ಟೋರ್‌ನಲ್ಲಿ ಲಭ್ಯವಿರುತ್ತದೆ) ಹಾಕಿಕೊಂಡು ಪೊಲೀಸ್ ಠಾಣೆಗೆ ಹೋಗದೇ ಇ-ಲಾಸ್ಟ್ ಆಪ್ಷನ್‍ಗೆ ಹೋಗಿ ದೂರನ್ನು ನೀಡಿ ಈ ಬಗ್ಗೆ Digital e-Acknowledgement ಪಡೆಯಬಹುದಾಗಿದೆ ಅಥವಾ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ಸ್ವೀಕೃತಿಯನ್ನು ಪಡೆಯಬಹುದಾಗಿದೆ ಎಂದಿದ್ದಾರೆ.

ADVERTISEMENT

ಈ Acknowledgement ಸಹಾಯದಿಂದ ಡುಪ್ಲಿಕೇಟ್ ಸಿಮ್ ಪಡೆದುಕೊಳ್ಳಬಹುದು. ನಂತರ www.ceir.gov.in ಎಂಬ ವೆಬ್‌ಸೈಟ್‍ಗೆ ಹೋಗಿ ತಮ್ಮ ಕಳುವಾದ ಅಥವಾ ಕಾಣೆಯಾದ ಅಥವಾ ಸುಲಿಗೆಯಾದ ಮೊಬೈಲ್ ಅನ್ನು ಬ್ಲಾಕ್ ಮಾಡಿ ರಿಕ್ವೇಸ್ಟ್ ಐ.ಡಿ. ಪಡೆದುಕೊಳ್ಳಬೇಕು. ಅದು 24 ಗಂಟೆಗಳಲ್ಲಿ ತಮ್ಮ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ. ನಂತರ ಅದು ಟ್ರ್ಯಾಕಿಂಗ್ ಕುರಿತು ನೇರವಾಗಿ ನಮ್ಮ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ರವಾನೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಆ ನಂತರ ನಿಮ್ಮ ಮೊಬೈಲ್ ಟ್ರೇಸ್ ಆದ ತಕ್ಷಣ ನೀವು ಇ-ಲಾಸ್ಟ್ ನೀಡಿದ ಪೊಲೀಸ್ ಠಾಣೆಗೆ ಹೋಗಿ ಸಂಪರ್ಕಿಸಿ ನಿಮ್ಮ ಮೊಬೈಲ್ ಪಡೆಯುವುದು. ಹಾಗೂ www.ceir.gov.in ಹೋಗಿ ಅನ್‍ಬ್ಲಾಕ್ ಮಾಡಿ ಉಪಯೋಗಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.