ADVERTISEMENT

ಮಣ್ಣಿನ ಗಣಪತಿ ಪ್ರತಿಷ್ಠಾಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:44 IST
Last Updated 29 ಜುಲೈ 2021, 13:44 IST
ವಿಜಯಪುರದ ಜ್ಞಾನಯೋಗಾಶ್ರಮಯದಲ್ಲಿ ನನ್ನ ಗಿಡ ನನ್ನ ಭೂಮಿ ಸಂಘಟನೆ ವತಿಯಿಂದ ಗುರುವಾರ ‘ಮನೆ ಮನೆಗೂ ಮಣ್ಣಿನ ಗಣಪತಿ’ ಸಂವಾದ ಕಾರ್ಯಕ್ರಮದಲ್ಲಿ ಬಸವರಾಜ ಬೈಚಬಾಳ ಮಾತನಾಡಿದರು
ವಿಜಯಪುರದ ಜ್ಞಾನಯೋಗಾಶ್ರಮಯದಲ್ಲಿ ನನ್ನ ಗಿಡ ನನ್ನ ಭೂಮಿ ಸಂಘಟನೆ ವತಿಯಿಂದ ಗುರುವಾರ ‘ಮನೆ ಮನೆಗೂ ಮಣ್ಣಿನ ಗಣಪತಿ’ ಸಂವಾದ ಕಾರ್ಯಕ್ರಮದಲ್ಲಿ ಬಸವರಾಜ ಬೈಚಬಾಳ ಮಾತನಾಡಿದರು   

ವಿಜಯಪುರ: ಪ್ಲಾಸ್ಟರ್ ಆಫ್ ಫ್ಯಾರಿಸ್ ಗಣಪತಿಯನ್ನು ಕೂರಿಸದೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿ ಮನೆ ಮನೆಯಲ್ಲಿ ಪ್ರತಿಷ್ಠಾಪಿಸಿ, ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಅಮೃತಾನಂದ ಶ್ರೀ ಹೇಳಿದರು.

ಇಲ್ಲಿನ ಜ್ಞಾನಯೋಗಾಶ್ರಮಯದಲ್ಲಿ ನನ್ನ ಗಿಡ ನನ್ನ ಭೂಮಿ ಸಂಘಟನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಮನೆ ಮನೆಗೂ ಮಣ್ಣಿನ ಗಣಪತಿ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹರ್ಷಾನಂದ ಶ್ರೀ ಮಾತನಾಡಿ, ನಮ್ಮ ಹಿಂದೂ ಸಂಪ್ರದಾಯದಂತೆ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಸಬೇಕು ಎಂದರು.

ADVERTISEMENT

‌ಸಂಚಾಲಕ ಬಸವರಾಜ ಬೈಚಬಾಳ ಮಾತನಾಡಿ, ನನ್ನ ಗಿಡ ನನ್ನ ಭೂಮಿ ಸಂಘಟನೆವತಿಯಿಂದ ಪ್ರತಿ ವರ್ಷ 5000 ಗಣಪತಿಯು ಮನೆ ಮನೆಗೆ ತಲುಪಿಸುವಂತಹ ಕೆಲಸವು ನಮ್ಮ ತಂಡ ಮಾಡುತ್ತಿದ್ದು, ಇದು ಮೂರನೇ ವರ್ಷವು ಎಲ್ಲರ ಮನೆಯಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಕೂರಿಸಲು ಪಣ ತೊಟ್ಟಿದ್ದೇವೆ. ಎಲ್ಲರು ಕೈ ಜೋಡಿಸಬೇಕು ಎಂದು ಹೇಳಿದರು.


ಸಿದ್ಧೇಶ್ವರ ಶ್ರೀಗಳುಸಾನ್ನಿಧ್ಯ ವಹಿಸಿದ್ದರು. ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ರಾಘವ ಅಣ್ಣಿಗೇರಿ, ಉಮೇಶ ವಂದಾಲ ಮಾತನಾಡಿದರು.

ವಿಜಯಕುಮಾರ ಪಾಟೀಲ, ಚಿದಾನಂದ ಔರಂಗಾಬಾದ, ಚಿದಾನಂದ ಯಳಮೇಲಿ, ಈರಣ್ಣ ಪಟ್ಟಣಶೆಟ್ಟಿ, ಬೈಲು, ಪ್ರವೀಣ ಕೂಡಗಿ, ರವಿ ಚವ್ಹಾಣ, ರಾಜಕುಮಾರ ಸಗಾಯಿ, ಬಸವರಾಜ ಗಾಳಿ, ಆನಂದ ಅಥಣಿ, ರವಿ ಬಿರಾದಾರ, ಗಿರೀಶ ಪಾಟೀಲ, ಸೋಮು ಮಠ, ಸಿದ್ದು ಕರಲ, ಶಶಿದರ ರೂಢಗಿ, ಶರಣು ಕುಂಬಾರ, ನಗರದ ಗಣಪತಿ ಮೂರ್ತಿ ತಯಾರಕರು, ವ್ಯಾಪಾರಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.