ತಿಕೋಟಾ: ಪಟ್ಟಣದಲ್ಲಿ ನಡೆಯುವ ಅಹಿಂದ ಸಮಾವೇಶವು ಲಿಂಗಾಯತರು ಸೇರಿದಂತೆ ಯಾವುದೇ ಸಮುದಾಯಗಳ ವಿರುದ್ದ ಅಲ್ಲ ಎಂದು ಅಹಿಂದ ಕರ್ನಾಟಕ ರಾಜ್ಯಧ್ಯಕ್ಷ ಪ್ರಭುಲಿಂಗ ದೊಡಮನೆ ಹೇಳಿದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನ ಹತ್ತಿರ ಶನಿವಾರ ತಾಲ್ಲೂಕ ಅಹಿಂದ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಆದೇಶ ಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಜ್ಯದ ಮೊದಲ ಹಿಂದುಳಿದ ನಾಯಕ ದೇವರಾಜ ಅರಸರು ರಚಿಸಿದ ರಾಜಕೀಯ ಪರಭಾಷೆ ಆಗಿದೆ. ಅಹಿಂದವನ್ನು ಸಿದ್ದರಾಮಯ್ಯ ಅವರು ಪುನರುಜ್ಜೀವನಗೊಳಿಸಿದ್ದಾರೆ. ಅಹಿಂದ ಹಿಂದಿನ ಉದ್ದೇಶ ಮೊದಲನೆಯದಾಗಿ ಇದು ಕರ್ನಾಟಕ ರಾಜಕೀಯದಲ್ಲಿ ಮುಂದುವರಿದ ಪ್ರಭಲ ಜಾತಿಯ ಪ್ರಾಬಲ್ಯಕ್ಕೆ ಸವಾಲಾಗಿದೆ. ಎರಡನೆಯದಾಗಿ ಇದು ತುಳಿತಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಕಾರಣವನ್ನು ಅನುಸರಿಸುವ ಗುರಿಯನ್ನು ಹೊಂದಿರುವ ರಾಜಕಿಯೇತರ ಸಾಮಾಜಿಕ ಚಳವಳಿಯಾಗಿದೆ’ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀರಪ್ಪ ಜುಮನಾಳ ಮಾತನಾಡಿ, ‘ಅಹಿಂದ ಸಮಾಜವನ್ನು ಇನ್ನೂ ಅಧಿಕ ಸಂಘಟನೆಯಾಗಬೇಕು. ಅಹಿಂದ ಸಮಾಜವು ಎಲ್ಲಾ ಕ್ಷೇತ್ರದಲ್ಲಿ ಮುಂದೆಬರಬೇಕು’ ಎಂದರು.
ಅಹಿಂದ ತಾಲ್ಲೂಕು ಘಟಕದ ಅಧ್ಯಕ್ಷ ಮಾಳಪ್ಪ ಗುಗ್ಗದಡ್ಡಿ, ಉಪಾದ್ಯಕ್ಷ ಸಿದ್ದಾರ್ಥ ಪರಣಾಕರ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಪ್ರಭಾವತಿ ನಾಟಿಕಾರ, ಮಹಿಳಾ ಘಟಕದ ತಾಲ್ಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಫರನಾಕರ, ಕಾರ್ಯದರ್ಶಿ ಸದಾಶಿವ ಪೂಜಾರಿಗೆ ಪ್ರಭುಲಿಂಗ ದೂಡಮನೆ ಆದೇಶ ಪತ್ರ ನೀಡಿದರು.
ನಾಗಠಾಣದ ಮಾಳಿಂಗರಾಯ ಮಹಾರಾಜ, ತಿಕೋಟಾ ಹೂನ್ನಮೇಶ್ವರ ದೇವಸ್ಥಾನ ಅರ್ಜಕ ಶೇಖಪ್ಪ ಪೋಜೀರಿ, ಹೂನ್ನಮೇಶ್ವರ ದೇವರ ಗದ್ದಗಿ ಅರ್ಚಕ ಅಪ್ಪಾಸಿ ಪೊಜೀರಿ ಸಾನ್ನುಧ್ಯ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ರಾಜು ಕಂಬೋಗಿ, ಜಿಲ್ಲಾಧ್ಯಕ್ಷ ಮಲ್ಲಣ ಶಿರಶ್ಯಾಡ, ರಾಜ್ಯ ಕಾರ್ಯದರ್ಶಿ ಶ್ರೀಶೈಲ ಕೌಲಗಿ, ವಿಜಯಪುರ ನಗರ ಘಟಕ ಕನಕದಾಸ ಅಧ್ಯಕ್ಷ ರಾಜು ಕಗ್ಗೋಡ, ರೈತ ಮಿತ್ರ ಅಧ್ಯಕ್ಷ ಎಚ್. ಎಂ. ಬಾಗವಾನ, ಜಿಲ್ಲಾ ದಲಿತ ಮುಖಂಡ ಅಡಿವೆಪ್ಪ ಸಾಲಗಲ, ಡಾ.ಆರ್.ಎನ್. ಶೇಖ, ಆರ್. ಎಸ್. ಪಟ್ಟಣಶಟ್ಟಿ, ಯಾಕುಬ ಜತ್ತಿ, ಶ್ಯಾನು ಕತೀಬ, ಮಲ್ಲು ಬಿದರಿ, ಬಾಬುಶಾ ಇಮ್ಮಡಿ, ಅಮಗೂಂಡ ಹಂಜಗಿ, ಭೀರಾಪ್ಪ ಟಕ್ಕಳಿಕ್ಕಿ, ಕರೆಪ್ಪ ಸಿದ್ದನಾಥ, ಶಿವಾನಂದ ಹಂಜಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.