ADVERTISEMENT

ಆಲಮೇಲ ತಾಲ್ಲೂಕಿನ ಬಣಜಿಗ ಸಮಾಜದ ಅಧ್ಯಕ್ಷರಾಗಿ ಸುಭೇದಾರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:31 IST
Last Updated 15 ಫೆಬ್ರುವರಿ 2026, 2:31 IST
ಆಲಮೇಲ ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸಿದ್ಧಲಿಂಗ ಸುಭೇದಾರ ಅವರನ್ನು ಆಯ್ಕೆ ಮಾಡಲಾಯಿತು
ಆಲಮೇಲ ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸಿದ್ಧಲಿಂಗ ಸುಭೇದಾರ ಅವರನ್ನು ಆಯ್ಕೆ ಮಾಡಲಾಯಿತು   

ಆಲಮೇಲ: ಪಟ್ಟಣದ ಅಳ್ಳೊಳ್ಳಿಮಠದಲ್ಲಿ ಶನಿವಾರ ನಡೆದ ಆಲಮೇಲ ತಾಲ್ಲೂಕಿನ ಬಣಜಿಗ ಸಮಾಜದ ಸಭೆಯಲ್ಲಿ ತಾಲ್ಲೂಕಿನ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸಿದ್ಧಲಿಂಗ ಸುಬೇದಾರ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ತಾಲ್ಲೂಕು ಉಪಾಧ್ಯಕ್ಷರಾಗಿ ಕಡಣಿ ಗ್ರಾಮದ ಗುರುಸಂಗ ಕತ್ತಿ, ಗೌರವ ಅಧ್ಯಕ್ಷರಾಗಿ ದೇವಣಗಾಂವ ಗ್ರಾಮದ ಶರಣ್ಣಪ್ಪ ಗುಬ್ಬೆವಾಡ, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ವಿಶ್ವನಾಥ ಕೊರಹಳ್ಳಿ  ಅವಿರೋಧ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ರವಿಂದ್ರ ವಾರದ ಅವರನ್ನು ರಾಜ್ಯ ಮತ್ತು ಜಿಲ್ಲಾ ಬಣಜಿಗ ಸಮಾಜದ ಪದಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ‌ ಬಿದರಿ, ಜಿಲ್ಲಾ ಪದಾಧಿಕಾರಿಗಳಾದ ಮುತ್ತು ಕಿಣಗಿ, ರಮೇಶ ಸಾಲಕ್ಕಿ, ತಲೂಕಿನ ಹಿರಿಯರಾದ ಶಿವುಕುಮಾರ ಗುಂದಗಿ, ಭಸವರಾಜ ಧನಶ್ರೀ, ತಾರಾಪೂರದ ಮಲ್ಲಿಕಾರ್ಜುನ ಜೋಗೂರು, ಬಸವರಾಜ ಗುಣಾರಿ, ನೀಲಕಂಠ ಜೋಗೂರ, ವಿಶ್ವನಾಥ ಮಹಾಜನ, ದೇವಣಗಾಂವ ಗ್ರಾಮದ ಶಿಕ್ಷಕ ಶಿವಾನಂದ ಕಲಬುರಗಿ, ರಮೇಶ ಸೊಡ್ಡಿ, ಡಾ. ಪ್ರಮೋದ ಮಹಾಜನ, ಶಿವಶರಣ ಗುಂದಗಿ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮದ ಬಣಜಿಕ ಸಮಾಜದವರು ಸಭೆಯಲ್ಲಿ ಪಾಲ್ಕೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.