ADVERTISEMENT

ವಿಜಯಪುರ: ‘ಸಂಘರ್ಷದ ಒಡನಾಡಿ’ ಹೊಸಮನಿಗೆ ಅಭಿನಂದನೆ ಇಂದು

‘ಡಾ.ಅಂಬೇಡ್ಕರ್‌ ಸಹವಾಸದಲ್ಲಿ’ ಪುಸ್ತಕದ 2ನೇ ಆವೃತ್ತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:55 IST
Last Updated 13 ಜುಲೈ 2025, 5:55 IST
ಅನಿಲ ಹೊಸಮನಿ
ಅನಿಲ ಹೊಸಮನಿ   

ವಿಜಯಪುರ: ಸಾಹಿತಿ, ಪತ್ರಕರ್ತ ಅನಿಲ ಹೊಸಮನಿ ಅವರಿಗೆ ಜುಲೈ 13ರಂದು ಬೆಳಿಗ್ಗೆ 10.30ಕ್ಕೆ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

‘ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯೊಂದಿಗೆ ಬಿಜಾಪುರದಲ್ಲಿ ಒಂದು ದಿನ’ ಎಂಬ ಅಭಿನಂದನಾ ಸಮಾರಂಭವನ್ನು ಮುಂಬೈನ ವಿಜಯ ಸುರ್ವಾಡೆ ಉದ್ಘಾಟಿಸುವರು. ಹೊಸಮನಿ ಅನುವಾದಿಸಿರುವ ‘ಡಾ.ಅಂಬೇಡ್ಕರ್‌ ಸಹವಾಸದಲ್ಲಿ’ ಪುಸ್ತಕದ 2ನೇ ಆವೃತ್ತಿಯನ್ನು ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಬಿಡುಗಡೆ ಮಾಡಲಿದ್ದಾರೆ.

ಮಧ್ಯಾಹ್ನ 1ಕ್ಕೆ ‘ಅನಿಲ ಹೊಸಮನಿಯವರ ಸಾಹಿತ್ಯ’ ಕುರಿತು ಗೋಷ್ಠಿ 1, ಮಧ್ಯಾಹ್ನ 2.30ಕ್ಕೆ ‘ವಿಜಯಪುರ ಜಿಲ್ಲೆಯ ದಲಿತ ಚಳವಳಿ ಮತ್ತು ಅನಿಲ ಹೊಸಮನಿ’ ವಿಷಯ ಕುರಿತು ಗೋಷ್ಠಿ 2, ಸಂಜೆ 4ಕ್ಕೆ ‘ಅನಿಲ ಹೊಸಮನಿ ಅವರೊಂದಿಗೆ ಸಂವಾದ’ ಗೋಷ್ಠಿ 3 ನಡೆಯಲಿದೆ. ಸಂಜೆ 5.30ಕ್ಕೆ ಹೊಸಮನಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.

ADVERTISEMENT

ಪ್ರಮುಖರ ಉಪಸ್ಥಿತಿ: ಸಾಹಿತಿ ಬಸವರಾಜ ಸೂಳಿಭಾವಿ, ಮಾವಳಿ ಶಂಕರ್‌, ಸತನ್ ಕುಮಾರ್‌ ಬೆಳಗಲಿ, ಪ್ರೊ.ರಾಜು ಆಲಗೂರ, ಆರ್‌.ಸುನಂದಮ್ಮ, ರಾಜಶೇಖರ ಯಡಹಳ್ಳಿ, ಡಾ.ಓಂಕಾರ ಕಾಕಡೆ, ಬಿ.ಶ್ರೀನಿವಾಸ, ಶ್ಯಾಮ್‌ ಘಾಟಗೆ, ಡಾ.ಸುಜಾತಾ ಚಲವಾದಿ, ಅಭಿಷೇಕ ಚಕ್ರವರ್ತಿ, ಹಣಮಂತ ಚಿಂಚೋಳಿ, ಬಸವರಾಜ ಜೋಗೂರ, ಸಿದ್ಧರಾಮ ಉಪ್ಪಿನ, ಶಾರದಾ ಹೊಸಮನಿ, ನಾಗರಾಜ ಲಂಬು, ಮುತ್ತು ಬಿಳೆಯಲಿ, ಯಲ್ಲಪ್ಪ ಡೊಮನಾಳ, ಬಸವರಾಜ ಹೂಗಾರ, ಆರತಿ ಶಹಾಪೂರ, ಕಲ್ಲಪ್ಪ ತೊರವಿ, ಮಲ್ಲು ಜಾಲಗೇರಿ, ರಾಯಪ್ಪ ಚಲವಾದಿ, ವಾಸುದೇವ, ಕಾಳೆ, ಚನ್ನು ಕಟ್ಟಿಮನಿ, ಮತೀನಕುಮಾರ ದೇವದರ್, ವೈ.ಎಸ್‌.ಗುಣಕಿ, ಪ್ರಭುಗೌಡ ಪಾಟೀಲ, ಸಿದ್ಧರಾಮ ಬಿರಾದಾರ, ಶೋಭಾ ಕಟ್ಟಿಮನಿ, ಜಂಬುನಾಥ ಕಂಚ್ಯಾಣಿ, ಎಸ್‌.ಎಂ.ಪಾಟೀಲ ಗಣಿಹಾರ, ಅಬ್ದುಲ್‌ ರೆಹಮಾನ್‌ ಬಿದರಕುಂದಿ, ಶಂಕರ ಬೈಚಬಾಳ, ಬಸವರಾಜ ಚಲವಾದಿ, ದೊಡ್ಡಣ್ಣ ಭಜಂತ್ರಿ, ಶ್ರೀನಾಥ ಪೂಜಾರಿ ಮತ್ತಿತರರು ಭಾಗವಹಿಸುವರು.

‘ಸಂವಿಧಾನ ಮನೆ’ ನಿರ್ಮಾಣ

ಮೇ ಸಾಹಿತ್ಯ ಬಳಗ ದಲಿತ ಸಂಘಟನೆಗಳು ಬೌದ್ಧ ವಿಹಾರ ನಿರ್ಮಾಣ ಸಮಿತಿ ಸೇರಿದಂತೆ ಹೊಸಮನಿ ಅವರ ಗೆಳೆಯರು ಕೂಡಿಕೊಂಡು ಸುಮಾರು ₹18 ಲಕ್ಷ ಮೊತ್ತದಲ್ಲಿ ಹೊಸಮನಿ ಅವರಿಗೆ ‘ಸಂವಿಧಾನ ಮನೆ’ ನಿರ್ಮಿಸಿಕೊಡಲು ಯೋಜನೆ ರೂಪಿಸಿದ್ದಾರೆ. ‘ಸಂವಿಧಾನ ಮನೆ’ ನಿರ್ಮಾಣಕ್ಕೆ ಜುಲೈ 13ರಂದು ಚಾಲನೆ ನೀಡಲಿದ್ದು ಮುಂದಿನ ಒಂದು ವರ್ಷದೊಳಗೆ ಹೊಸಮನೆ ಕಟ್ಟಿ ಹೊಸಮನಿ ಅವರಿಗೆ ಹಸ್ತಾಂತರಿಸುವುದಾಗಿ ಸಾಹಿತಿ ಸಂಘಟಕ ಬಸವರಾಜ ಸೂಳಿಭಾವಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.