
ತಾಳಿಕೋಟೆ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ನಿಜಶರಣ ಅಂಬಿಗೇರ ಚೌಡಯ್ಯ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ಜರುಗಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಹೊರಟು ಅಂಬೇಡ್ಕರ ವೃತ್ತ, ಕತ್ರಿ ಬಜಾರ, ಶಿವಾಜಿ ವೃತ್ತ, ರಾಣಾಪ್ರತಾಪಸಿಂಹ ವೃತ್ತ, ಬಸ್ ನಿಲ್ದಾಣದ ಮೂಲಕ ಮರಳಿ ಬಸವೇಶ್ವರ ವೃತ್ತಕ್ಕೆ ಬಂದು ತಹಶೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರಳನ್ನು ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಂಜಲಿ ಪರಿವಾರಕ್ಕೆ ₹50 ಲಕ್ಷ ಹಣ ಪರಿಹಾರ ನೀಡಬೇಕು. ಹದಗೆಟ್ಟಿರುವ ರಾಜ್ಯ ಕಾನೂನು ಸುವ್ಯವಸ್ಥೆಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ, ನಿಜಶರಣ ಅಂಬಿಗೇರ ಚೌಡಯ್ಯ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಶುರಾಮ ತಂಗಡಗಿ, ದಲಿತ ಮುಖಂಡ ಜೈಭೀಮ ಮುತ್ತಗಿ, ರಾಜ್ಯ ಬುಡಕಟ್ಟು ಹಿತಸಂರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ ಕಾಮನಕೇರಿ, ಕುವೆಂಪು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎನ್.ನಾಯ್ಕೊಡಿ, ಶಿವರಾಜ ಗುಂಡಕನಾಳ ನಾಗೂರ ಮಾತನಾಡಿದರು.
ಪ್ರಮುಖರಾದ ಮಂಜುನಾಥಶೆಟ್ಟಿ, ಆರ್.ಎಲ್.ಕೊಪ್ಪದ, ಮುದಕಣ್ಣ ಬಡಿಗೇರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರಾಘವೇಂದ್ರ ಚವಾಣ, ರಾಘವೇಂದ್ರ ವಿಜಾಪುರ, , ಗೋಪಾಲ ಕಟ್ಟಿಮನಿ, ಇಬ್ರಾಹಿಂ ಮನ್ಸೂರ, ಫಯಾಜ ಉತ್ನಾಳ, ರಾಜು ಸಜ್ಜನ, ಮಹಾಂತೇಶ ಮುರಾಳ, ರಾಘು ಮಾನೆ, ಶಫೀಕ ಇನಾಮದಾರ, ನೀಲಮ್ಮ ಪಾಟೀಲ, ನಾಗರಾಜ ಬಳಿಗಾರ, ಕಿರಣ ಬಡಿಗೇರ, ಸುವರ್ಣಾ ಬಿರಾದಾರ, ಕಾಶಿನಾಥ ತಳವಾರ, ಶ್ರೀಶೈಲ ಬಿರಾದಾರ, ಕಾಶಿನಾಥ ತಳವಾರ ಅಸ್ಕಿ, ಬಾಲು ತಳವಾರ, ದಂಡಪ್ಪ ಬಡಿಗೇರ, ಸಿದ್ದು ತಳವಾರ, ರಮೇಶ ಮೂಕಿಹಾಳ, ಮಲ್ಲಿಕಾರ್ಜುನ ಜೂಲಿ, ಭೀಮಣ್ಣ ತಳಾವಾರ, ಶಶಿಕಾಂತ ಮೂಕಿಹಾಳ, ಲಕ್ಷ್ಮಣ ತಳವಾರ, ಮಾನಪ್ಪ ನಾಯ್ಕೊಡಿ, ಕಾಶಿನಾಥ ಮದರಿ, ಮಲ್ಲು ಮದ್ದರಕಿ, ಬಸವರಾಜ ಯಡಹಳ್ಳಿ, ಅಡತ ಅಸೋಶಿಯೇಶನ್ ನ ಮಲ್ಲಿಕಾರ್ಜುನ ನಾಗರಾಳ, ಸುರೇಶ ಪಾಟೀಲ, ಅಶೋಕ ಜಾಲವಾದಿ, ಅಶೋಕ ಚಿನಗುಡಿ, ಈರಣ್ಣ ಸಜ್ಜನ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.