ADVERTISEMENT

ಆಲಮೇಲ | ಪ್ರಜಾಸೌಧ ಕಟ್ಟಡಕ್ಕೆ ₹ 8.60 ಕೋಟಿ ಅನುದಾನ: ಶಾಸಕ ಅಶೋಕ ಮನಗೂಳಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:26 IST
Last Updated 6 ಜನವರಿ 2026, 2:26 IST
ಆಲಮೇಲ‌ ಪಟ್ಟಣದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಭೂಮಿಪೊಜೆ ನೆರವೇರಿಸಿದರು
ಆಲಮೇಲ‌ ಪಟ್ಟಣದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಭೂಮಿಪೊಜೆ ನೆರವೇರಿಸಿದರು   

ಆಲಮೇಲ: ನೂತನ ತಾಲ್ಲೂಕು ಕೇಂದ್ರಕ್ಕೆ ಸೌಲಭ್ಯಗಳನ್ನು ನೀಡಲು ಸರ್ಕಾರದ ಸ್ಪಂದಿಸಿದ್ದು, ₹ 8.60 ಕೋಟಿ ವೆಚ್ಚದಲ್ಲಿ ಶೀಘ್ರವೇ ಪ್ರಜಾಸೌಧ ಕಟ್ಟಡದ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಅವರು ಪಟ್ಟಣದ ಮಸಾಲಿ ಲೇಔಟ್‌ನಲ್ಲಿ ಶನಿವಾರ ಹಿಂದುಳಿದ ವರ್ಗಗಳ ಇಲಾಖೆ ಹಮ್ಮಿಕೊಂಡಿದ್ದ ₹4 ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಆಲಮೇಲ ತಾಲ್ಲುಕು ಕೇಂದ್ರ ಹೆಸರಿಗಷ್ಟೆ ಅಲ್ಲ, ₹20 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ, ವಿದ್ಯುತ್‌ ದೀಪ ಅಳವಡಿಸುವ ಕಾರ್ಯ ಸೇರಿದಂತೆ, ತಾಲ್ಲೂಕು ಕ್ರೀಡಾಂಗಣ ಮೊದಲಾದ ಕಾಮಗಾರಿಗಳಿಗೆ ಟೆಂಡ‌ರ್ ಪ್ರಕ್ರಿಯೆ ಮುಗಿದಿದ್ದು, ಪ್ರಗತಿಯ ದಿಕ್ಸೂಚಿ ತೋರಿಸುತ್ತವೆ ಎಂದರು.

ADVERTISEMENT

ಪಟ್ಟಣ ಪಂಚಾಯತಿ ಅಧ್ಯಕ್ಷ ಸಾಧಿಕ ಸುಂಬಡ, ಹಿಂದುಳಿದ ವರ್ಗಗಳ ತಾಲ್ಲೂಕು ಅಧಿಕಾರಿ ರವೀಂದ್ರ ಬಂಥನಾಳ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಪ.ಪಂ.ಮುಖ್ಯಾಧಿಕಾರಿ ಸುರೇಶ ನಾಯಕ, ಪ.ಪಂ.ಸದಸ್ಯರಾದ ವೀರಭದ್ರ ಕತ್ತಿ, ಭೀಮು ಬೊಮ್ಮನಳ್ಳಿ, ಚಂದು ಹಳೆಮನಿ, ಭಾಗ್ಯವಂತ ಆಲಮೇಲಕರ ಭಾಗವಹಿಸಿದ್ದರು.

ಅಧಿಕಾರಿ ನಂದಪ್ಪ ಅನಗೊಂಡ ಸ್ವಾಗತಿಸಿದರು. ಗಂಗಪ್ಪ ತಾವರಖೇಡ ನಿರೂಪಿಸಿದರು. ನಾನಾಗೌಡ ಸಿದರೆಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.