ADVERTISEMENT

ತುಂಬಿದ ಹೊರ್ತಿ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:49 IST
Last Updated 10 ಜುಲೈ 2025, 5:49 IST
ಹೊರ್ತಿಯ ಕೆರೆಯ ಆವರಣದಲ್ಲಿ ಬುಧವಾರ ಶಾಸಕ ಯಶವಂತರಾಯಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು
ಹೊರ್ತಿಯ ಕೆರೆಯ ಆವರಣದಲ್ಲಿ ಬುಧವಾರ ಶಾಸಕ ಯಶವಂತರಾಯಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು   

ಹೊರ್ತಿ: ‘ಕೃಷ್ಣೆಯಿಂದ 19 ಕೆರೆಗಳಿಗೆ ನೀರು ಹರಿಸುವ ಯೋಜನೆ ಹಾಗೂ ರೇವಣಸಿದ್ಧೇಶ್ವರ ಏತ ನೀರಾವರಿ ಕಾಮಗಾರಿ ಈ ಭಾಗದ ರೈತರಿಗೆ ತುಂಬಾ ಅನೂಕೂಲಕರ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕೃಷ್ಣೆಯ ನೀರಿನಿಂದ ತುಂಬಿದ ಹೊರ್ತಿಯ ಕೆರೆಗೆ ಬುಧವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಮಾತನಾಡಿದರು.

‘ಇಂಡಿ ಭಾಗದ ರೇವಣಸಿದ್ದೇಶ್ವರ ಏತ ನೀರಾವರಿ ಮತ್ತು ತಿಡಗುಂದಿ ಎಕ್ಸ್‌ಟೆನ್ಷನ್‌ ಕಾಲುವೆಯ ಯೋಜನೆಯಿಂದ 1,07,500 ಏಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಇಂಡಿ ತಾಲ್ಲೂಕು ಸಮಗ್ರ ನೀರಾವರಿಗೆ ಆದ್ಯತೆ ನೀಡಲಾಗುವುದು’ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡ ಎಂ.ಆರ್‌. ಪಾಟೀಲ ಮಾತನಾಡಿದರು. ಬರಡೋಲ ಹಿರೇಮಠ ಗುರುಗಳು ಪೂಜಾವಿಧಿ ನಡೆಸಿಕೊಟ್ಟರು.

ಇಂಡಿ ಎಸಿ ಅನುರಾಧಾ ವಸ್ತ್ರದ, ತಹಶೀಲ್ದಾರ್‌ ವಿಜಯಕುಮಾರ ಕಡಕಬಾವಿ, ಬಳ್ಳೊಳ್ಳಿ ಉಪ ತಹಶೀಲ್ದಾರ್‌ ಎ.ಎಸ್. ಗೋಟ್ಯಾಳ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ, ತಾಲ್ಲೂಕು ಪಂಚಾಯಿತಿ ಇಒ ಡಾ. ಬಿ.ಎಚ್. ಕನ್ನೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ. ಬಿ.ಪೂಜಾರಿ, ಗುರಣಗೌಡ ಪಾಟೀಲ, ಮುಖಂಡ ಎಂ.ಆರ್‌. ಪಾಟೀಲ, ಬಿ.ಬಿ. ಗಡ್ಡದ, ಪಿಕೆಪಿಎಸ್ ಸಿಇಒ ಅಣ್ಣು ಪುಜಾರಿ, ಹೊರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಭೋಸಗಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ ನಾಯಕ,  ಪಿಡಿಒ ಮಹೇಶ ಟಿ.ನಾಯಕ ಇದ್ದರು.

ಹೊರ್ತಿಯ ಕೆರೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷ್ಣೆಯ ಹಾಗೂ ಭೀಮೆಯ ನದಿ ನೀರಿನಿಂದ ತುಂಬಿದ ಹೊರ್ತಿಯ ಕೆರೆಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.