ADVERTISEMENT

ರೋಲ್‌ಕಾಲ್‌ ಹೋರಾಟಗಾರರಿಗೆ ಅಂಜುವ ಅಗತ್ಯವಿಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 6:49 IST
Last Updated 21 ನವೆಂಬರ್ 2020, 6:49 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಮರಾಠಾ ಸಮಾಜ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರೋಲ್‌ಕಾಲ್‌ ಹೋರಾಟಗಾರರುಕರೆ ನೀಡಿರುವ ಕರ್ನಾಟಕ ಬಂದ್‌ಗೆ ಮುಖ್ಯಮಂತ್ರಿಗಳು ಹೆದರಬೇಕಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡಿಗರ ಮತಗಳು ಹೋಗುತ್ತವೆ ಎಂಬ ಭಯ ಬೇಡ. ಮುಖ್ಯಮಂತ್ರಿ ಅವರು ಮರಾಠಾ ಸಮಾಜದ ಅಭಿವೃದ್ಧಿ ಪ್ರಾಧಿಕಾರ ಹಿಂತೆಗೆದುಕೊಂಡರೆ ದೊಡ್ಡ ಅನಾಹುತವಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಕನ್ನಡದ ಹೆಸರಲ್ಲಿ ವಾಟಾಳ್‌ ನಾಗರಾಜ್‌, ಕರವೇ ಅಧ್ಯಕ್ಷ ಸರ್ಕಾರದಿಂದ ₹ 50 ಲಕ್ಷ, ₹ 60 ಲಕ್ಷ ಅನುದಾನ ಏತಕ್ಕೆ ಪಡೆದುಕೊಂಡಿದ್ದಾರೆ? ಇವರಿಂದ ನಾವು ಕಲಿಯಬೇಕಾಗಿರುವುದು ಏನೂ ಇಲ್ಲ’ ಎಂದರು.

‘ಮರಾಠಾ ಸಮಾಜ ಹಿಂದೂ ಧರ್ಮದ ಉಳಿವಿಗಾಗಿ, ದೇಶಕ್ಕಾಗಿ ಹೋರಾಟ ನಡೆಸಿರುವ ಕ್ಷತ್ರಿಯ ಸಮಾಜವಾಗಿದೆ. ಕಾನೂನಾತ್ಮಕವಾಗಿ ಪ್ರಾಧಿಕಾರಕ್ಕೆ ಇನ್ನೂ ಹೆಚ್ಚಿನ ಸವಲತ್ತು ನೀಡಬೇಕು’ ಎಂದು ಮುಖ್ಯಮಂತ್ರಿಗೆ ಆಗ್ರಹಿಸಿದರು. ಹಿಂದೂ ಸಮಾಜ ಉಳಿಯಲು ಶಿವಾಜಿ ಮಹಾರಾಜ ಕಾರಣರಾಗಿದ್ದಾರೆ ಎಂದು ಹೇಳಿದರು. ಬೆಳಗಾವಿ ವಿಷಯದಲ್ಲಿ ಶಿವಸೇನೆ, ಅಜಿತ್‌ ಪವಾರ್‌ ಹೇಳಿಕೆಗೆ ಯಾವತ್ತೂ ನಮ್ಮ ವಿರೋಧವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.