ADVERTISEMENT

ಬಸವನಬಾಗೇವಾಡಿ | ಬಸವ ಸಂಸ್ಕೃತಿ ಯಶಸ್ವಿಗೆ ಶ್ರಮಿಸಿ: ಸಚಿವ ಶಿವಾನಂದ

ಸೆ.1ರಂದು ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:48 IST
Last Updated 31 ಆಗಸ್ಟ್ 2025, 5:48 IST
ಬಸವನಬಾಗೇವಾಡಿಯ ಬಸವೇಶ್ವರ ದೇವಾಲಯದ ಸಿಬಿಎಸ್ಇ ಶಾಲಾವರಣದ ನಂದಿ‌ ರಂಗಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಪೂರ್ವಸಿದ್ಧತಾ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು
ಬಸವನಬಾಗೇವಾಡಿಯ ಬಸವೇಶ್ವರ ದೇವಾಲಯದ ಸಿಬಿಎಸ್ಇ ಶಾಲಾವರಣದ ನಂದಿ‌ ರಂಗಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಪೂರ್ವಸಿದ್ಧತಾ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು   

ಬಸವನಬಾಗೇವಾಡಿ: 'ಪ್ರತಿಯೊಬ್ಬರೂ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ತನು,‌ ಮನ, ಧನದಿಂದ ಶ್ರಮಿಸಬೇಕಿದ್ದು, ಅಭಿಯಾನದ ಯಶಸ್ಸು ಬಸವ ಜನ್ಮಭೂಮಿಯ ನಮ್ಮ ನೆಲಕ್ಕೆ ಸಲ್ಲಲಿದೆ" ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಬಸವ ಜನ್ಮಸ್ಥಳವಾದ ಈ ನೆಲದಲ್ಲಿ ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನದಿಂದ ನಡೆಯುತ್ತಿರುವುದು ನಮ್ಮ ಸುದೈವ. ಬಸವಭೂಮಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಇಡೀ ಬಸವವನಬಾಗೇವಾಡಿ ಜನತೆಯ ಮನೆಯ ಕಾರ್ಯಕ್ರಮದಂತೆ ಸೇವಾ ಕಾರ್ಯ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಬೇಕು’ ಎಂದು ಕೋರಿದರು.

ಲಕ್ಷಾಂತರ ಸಂಖ್ಯೆಯಲ್ಲಿ ಬಸವ ಮನಸ್ಸುಗಳು ಆಗಮಿಸಲಿದ್ದಾರೆ. ಯಾರಿಗೂ ಯಾವುದೇ ಸಮಸ್ಯೆ ಆಗದಂತೆ ಹಾಗೂ ಸೇವಾ ಲೋಪ ಆಗದಂತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ಹೊರಗಿನಿಂದ ಬರುವ ಬಸವ ಭಕ್ತರಿಗೆ ಸ್ಥಳೀಯರು ತಮ್ಮ ಮನೆಗಳಲ್ಲಿ ಆತಿಥ್ಯ ಕಲ್ಪಿಸಬೇಕು. ಕುಂಭ ಮೇಳವನ್ನು ಮೀರಿಸುವಂತೆ ಬಸವಜನ್ಮಭೂಮಿ ಜನರು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂಗನಗೌಡ ಚಿಕ್ಕೊಂಡ ಮನವಿ ಮಾಡಿದರು.

ADVERTISEMENT

ಬಸವವನಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಶ್ರೀ, ಮನಗೂಳಿ ವಿರಕ್ತ ಮಠದ ವಿರತೀಶಾನಂದ ಶ್ರೀ, ಮುಖಂಡರಾದ ಐ.ಸಿ. ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಬಸನಗೌಡ ಹರನಾಳ ಮಾತನಾಡಿದರು.

ಹಿರಿಯರಾದ ಎಂ.ಜಿ.ಆದಿಗೊಂಡ, ಸುರೇಶಗೌಡ ಪಾಟೀಲ, ವಿವೇಕಾನಂದ ಕಲ್ಯಾಣಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ತಹಶೀಲ್ದಾರ್‌ ಯಮನಪ್ಪ ಸೋಮನಕಟ್ಟಿ, ಮುಖಂಡರಾದ, ಲೋಕನಾಥ ಅಗರವಾಲ, ಶಿವನಗೌಡ ಬಿರಾದಾರ, ಬಸನಗೌಡ ಹರನಾಳ, ಎಫ್.ಡಿ.ಮೇಟಿ, ಮುತ್ತಪ್ಪ ಗುಂಡಳ್ಳಿ, ಸಂಗಮೇಶ ಓಲೇಕಾರ, ಅಶೋಕ ಚಲವಾದಿ, ವೀರಣ್ಣ ಮರ್ತೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.