ADVERTISEMENT

ವಿಜಯಪುರ: ಬೆರಗು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ 26ಕ್ಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:41 IST
Last Updated 23 ಫೆಬ್ರುವರಿ 2026, 7:41 IST
ಬೆರಗು ಪ್ರಕಾಶನ ಕಡಣಿ
ಬೆರಗು ಪ್ರಕಾಶನ ಕಡಣಿ   

ಸಿಂದಗಿ: ನಗರದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಫೆ.26 ರಂದು ಬೆಳಿಗ್ಗೆ 10 ಗಂಟೆಗೆ ಬೆರಗು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇದೇ ಸಂದರ್ಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಸ್ಮರಣೆಗಾಗಿ ಕಡಣಿ ಬೆರಗು ಪ್ರಕಾಶನದಿಂದ ಏಕಕಾಲಕ್ಕೆ 25 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟರ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಅಶೋಕ ಮನಗೂಳಿ ಸಮಾರಂಭ ಉದ್ಘಾಟಿಸುವರು, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ  ಪುಸ್ತಕಗಳನ್ನು ಬಿಡುಗಡೆ ಮಾಡುವರು. ಪ್ರಶಸ್ತಿ ಪುರಸ್ಕೃತ ಪುಸ್ತಕಗಳನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಬಿಡುಗಡೆ ಮಾಡುವರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅಧ್ಯಕ್ಷತೆ ವಹಿಸಿಕೊಳ್ಳುವರು. ಸಿಂದಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಎಸ್.ಎಸ್.ಹಳೇಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮೀ ಕತ್ತಿ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಗೌರವ ಉಪಸ್ಥಿತಿ ವಹಿಸಿಕೊಳ್ಳುವರು ಎಂದು ಬೆರಗು ಪ್ರಕಾಶನ ತಿಳಿಸಿದೆ.

ಪ್ರಶಸ್ತಿಗೆ ಆಯ್ಕೆಯಾದವರ ವಿವರ

ದಿವಂಗತ ಎಂ.ಸಿ.ಮನಗೂಳಿ ಸ್ಮರಣಾರ್ಥ ದತ್ತಿ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ –ಅಂಕಿತ ಪ್ರಕಾಶನ ಬೆಂಗಳೂರು, ₹25 ಸಾವಿರ ನಗದು, ಪ್ರಶಸ್ತಿ ಫಲಕ, ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ-ಕಲಬುರಗಿಯ ಸಾಹಿತಿ ಶ್ರೀಶೈಲ ನಾಗರಾಳ, ₹10 ಸಾವಿರ ನಗದು, ಪ್ರಶಸ್ತಿ ಫಲಕ, ಪ್ರೊ.ಎಚ್.ಟಿ.ಪೋತೆ ರಾಜ್ಯಮಟ್ಟದ ಹಸ್ತಪ್ರತಿ ಪುರಸ್ಕಾರ ಪ್ರಶಸ್ತಿ-ಅನುವಾದಿತ ಕೃತಿ ಯುದ್ಧ ಮೃದಂಗ(ಲೇ. ದೇವೂ ಮಾಕೊಂಡ ಸಿಂದಗಿ), ₹10 ಸಾವಿರ ನಗದು, ಪ್ರಶಸ್ತಿ ಫಲಕ, ದಿವಂಗತ ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ದತ್ತಿ ರಾಜ್ಯಮಟ್ಟದ ಬೆರಗು ಪುಸ್ತಕ ಪ್ರಶಸ್ತಿ -ಕೃತಿ ಅಪ್ಪನ ಆಟೋಗ್ರಾಫ್(ಲೇ.ಅನಂತ ಕುಣಿಗಲ್ ತುಮಕೂರು), ₹5 ಸಾವಿರ ನಗದು, ಪ್ರಶಸ್ತಿ ಫಲಕ, ಶಂಕರ ಬೈಚಬಾಳ ರಾಜ್ಯಮಟ್ಟದ ಸೃಜನೇತರ ಸಾಹಿತ್ಯ ಪ್ರಶಸ್ತಿ-ಕೃತಿ ಸಮುದ್ರ ತೆರೆಸಿ ಸರಿಸಿ(ಲೇ.ಪದ್ಮಿನಿ ನಾಗರಾಜು ಬೆಂಗಳೂರು. ಕೃತಿ-ಸುರದೇನು(ಲೇ.ಮಹಾದೇವ ಬಸರಕೋಡ ಬಾಗಲಕೋಟೆ, ₹ತಲಾ 5 ಸಾವಿರ ನಗದು, ಪ್ರಶಸ್ತಿ ಫಲಕ, ಪ್ರೊ.ಎಚ್.ಟಿ.ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ-ಕೃತಿ ಲಚಮವ್ವ ಮತ್ತು ಇತರೆ ಕತೆಗಳು(ಲೇ.ಸುಜಾತಾ ಚಲವಾದಿ ತಾಳಿಕೋಟೆ),₹ 5 ಸಾವಿರ ನಗದು, ಪ್ರಶಸ್ತಿ ಫಲಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.